ಜಿಲ್ಲೆ

ಗುರು ಆರಾಧನಾ 10ರಂದು

ವಿಜಯವಾಣಿ ಸುದ್ದಿಜಾಲ ಧಾರವಾಡ

ಹುಬ್ಬಳ್ಳಿಯ ಶ್ರೀ ಸ ಸ ಗಣಪತರಾವ ಮಹಾರಾಜ್​ ಶಿಷ್ಯ-ಪ್ರಶಿಷ್ಯ ಸತ್ಸಂಗ ಮಂಡಳಿ ವತಿಯಿಂದ ನ. 10ರಂದು ಗೋಕುಲ ರಸ್ತೆ ರಾಜಧಾನಿ ಕಾಲನಿಯ ಕರಿಯಮ್ಮ ದೇವಸ್ಥಾನದಲ್ಲಿ ಗುರು ಆರಾಧನಾ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಅಂದು ಬೆಳಗ್ಗೆ 9 ಗಂಟೆಗೆ ನಗರ ಸಂಕೀರ್ತನೆ, 10 ಗಂಟೆಗೆ ಯುವ ಚಿಂತನೆ, ಗುರುವಿನ ಮಹತ್ವ ಕುರಿತು ಪ್ರವಚನ ನಡೆಯಲಿದೆ. ರವೀಂದ್ರನಾಥ ಮಹಾರಾಜರು, ರುದ್ರಗೌಡ ಶರಣರು, ಗೊಂಗಾಣೆ ಶರಣರು, ಪ್ರಕಾಶ ಮಹಾರಾಜರು, ಮಹೇಶ ಮಹಾರಾಜರು ಪ್ರವಚನ ನೀಡಲಿದ್ದಾರೆ. ತಾರಾಚಂದ ಮಹಾರಾಜರು ಸಾನ್ನಿಧ್ಯ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.