ಜಿಲ್ಲೆ

ಸಂಘ ಪರಿವಾರದಿಂದ ಗುರುಪೂಜೆ

ಸುನಿಲ್ ಪೊನ್ನೇಟಿ

ಕುಶಾಲನಗರ

ಜಿಲ್ಲೆಯ ವಿವಿಧ ಹಾಡಿಗಳಲ್ಲಿ, ಕಾಲೋನಿಗಳಲ್ಲಿ ಬಡವರ ನಡುವೆ ಧಾರ್ಮಿಕ, ಸಾಂಸ್ಕೃತಿಕ ಕೆಲಸ ಮಾಡಿಕೊಂಡಿರುವ ಕುಶಾಲನಗರ ಸಮೀಪದಲ್ಲಿರುವ ಗಂಧದ ಕೋಟೆಯ ಶ್ರೀ ರಾಜೇಶನಾಥ ಗುರೂಜಿ ಅವರನ್ನು ಸಂಘ ಪರಿವಾರದ ವತಿಯಿಂದ ಈಚೆಗೆ ಗುರು ಪೂರ್ಣಿಮೆ ದಿನದಂದು ಗೌರವಿಸಲಾಯಿತು.

ಕೂಡು ಮಂಗಳೂರು ಗ್ರಾಮದ ನಿವೃತ್ತ ದೈಹಿಕ ಶಿಕ್ಷಕ, ಮಕ್ಕಳಿಗೆ ಹಾಗು ಸಾರ್ವಜನಿಕರಿಗೆ ಯೋಗ ಮತ್ತು ಆರೊಗ್ಯದ ಬಗ್ಗೆ ಉಚಿತ ತರಬೇತಿ ನೀಡುತ್ತಿರುವ ಗಣೇಶ್ ಮಾಸ್ಟರ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾಸಿ ಗೌರವಿಸಲಾಯಿತು.

ಈ ಸಂಧರ್ಭ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಬಿ.ಬಿ. ಭಾರತೀಶ್, ಮಂಜುನಾಥ್, ಪ್ರವೀಣ್, ಶಶಿ ಕಿರಣ್, ಭಾಸ್ಕರನಾಯ್ಕ್, ದರ್ಶನ್, ವ್ಯೆಶಾಕ್ ಗ್ರಾಮಸ್ಥರು ಇದ್ದರು.