ಜಿಲ್ಲೆ

ಬಗರ್ ಹುಕುಂ ಸಮಿತಿ ಸದಸ್ಯರ ನೇಮಕ

ಗುಂಡ್ಲುಪೇಟೆ: ಪಟ್ಟಣದ ತಾಲೂಕು ಕಚೇರಿಯಲ್ಲಿ ಗುರುವಾರ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಅಧ್ಯಕ್ಷತೆಯಲ್ಲಿ ಬಗರ್ ಹುಕುಂ ಸಮಿತಿಯ ಸದಸ್ಯರ ನೇಮಕ ಹಾಗೂ ಮೊದಲ ಸಭೆ ನಡೆಯಿತು.

ನೂತನ ಸದಸ್ಯರಾಗಿ ತೆರಕಣಾಂಬಿ ಎಪಿಎಂಸಿ ಸದಸ್ಯ ಪಿ.ಮಹದೇವಪ್ಪ, ಬರಗಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಕಲಾವತಿ, ಹಂಗಳ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನಾಗರಾಜು ಅವರನ್ನು ನೇಮಕಮಾಡಲಾಯಿತು. ಸಭೆಯಲ್ಲಿ ಸಮಿತಿಯ ಕಾರ್ಯದರ್ಶಿ ತಹಸೀಲ್ದಾರ್ ರಮೇಶ್ ಬಾಬು ತಾಲೂಕಿನಲ್ಲಿ ಅಕ್ರಮ ಸಕ್ರಮ ಯೋಜನೆಯಡಿ ಬಾಕಿಯಿರುವ ಅರ್ಜಿಗಳನ್ನು ವಿಲೇವಾರಿ ಮಾಡುವ ಸಂಬಂಧ ಚರ್ಚಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.