ಜಿಲ್ಲೆ

ಎಂ.ಎಸ್.ಶಿವಶಂಕರಪ್ಪ ಬೀಳ್ಕೊಡುಗೆ

ಕಿರಣ್ ಮಾದರಹಳ್ಳಿ

ಗುಂಡ್ಲುಪೇಟೆ: ಪೊಲೀಸ್ ಠಾಣೆಯಲ್ಲಿ ಅಪರಾಧ ವಿಭಾಗದ ಸಬ್ ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾದ ಎಂ.ಎಸ್.ಶಿವಶಂಕರಪ್ಪ ಅವರನ್ನು ಬುಧವಾರ ಸಹೋದ್ಯೋಗಿಗಳು ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಟ್ಟರು. ಸರ್ಕಲ್ ಇನ್ಸ್‌ಪೆಕ್ಟರ್ ಪರಶಿವಮೂರ್ತಿ, ಸಬ್‌ಇನ್ಸ್‌ಪೆಕ್ಟರ್‌ಗಳಾದ ಆರ್.ಚಂದ್ರಪ್ಪ, ಜಯರಾಮು, ಸಿಬ್ಬಂದಿ ಗಂಗಾಧರ್, ರೇವಣ್ಣಸ್ವಾಮಿ, ಬಿ.ಎಂ.ಪ್ರಭುಸ್ವಾಮಿ, ಜಗದೀಶ್, ಮಂಜುನಾಥ್, ಮಹದೇವಸ್ವಾಮಿ ಇತರರಿದ್ದರು.