ಜಿಲ್ಲೆ

ಗ್ರಾಮದ ಅಭಿವೃದ್ಧಿಗೆ ಅನುದಾನ

ಲಲಾಟಾಕ್ಷ ಎಸ್

ಭಾರತೀನಗರ: ನಿಮ್ಮಗಳ ಸಹಕಾರದಿಂದ ವಿಧಾನ ಪರಿಷತ್ ಸದಸ್ಯನಾಗಿದ್ದು, ನಿಮ್ಮ ಗ್ರಾಮದ ಅಭಿವೃದ್ಧಿಗೆ ನನ್ನ ಅನುದಾನದಿಂದ ಕೈಲಾದ ನೆರವು ನೀಡಲು ಸಿದ್ಧನಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ತಿಳಿಸಿದರು.


ಮೆಣಸಗೆರೆ ಗ್ರಾಮ ಪಂಚಾಯಿತಿ ವತಿಯಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ನಾನು ಪರಿಷತ್ ಸದಸ್ಯನಾಗಿದ್ದರು ಕೂಡ ನನ್ನ ಶಕ್ತಿ ಮೀರಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇನೆ. ಯಾವುದೇ ಕೆಲಸ ಕಾರ್ಯಗಳಿಗೆ ನನ್ನನ್ನು ಭೇಟಿ ಮಾಡಿ. ಗ್ರಾಮಗಳ ಅಭಿವೃದ್ಧಿಗೆ ಒಗ್ಗಟಾಗಿ ಅಭಿವೃದ್ಧಿಯತ್ತ ಚಿತ್ತ ಹರಿಸಬೇಕು. ಚುನಾವಣಾ ಸಂದರ್ಭದಲ್ಲಿ ಮಾತ್ರ ರಾಜಕೀಯ ಮಾಡಿ. ಉಳಿದಂತೆ ಗ್ರಾಮಗಳ ಅಭಿವೃದ್ಧಿಗೆ ಎಲ್ಲರು ಒಟ್ಟಾಗಿ ಶ್ರಮಿಸಿ ಎಂದು ಕಿವಿಮಾತು ಹೇಳಿದರು.


ತಾಪಂ ಮಾಜಿ ಸದಸ್ಯ ಬಿ.ಗಿರೀಶ್, ಗ್ರಾಪಂ ಅಧ್ಯಕ್ಷೆ ಶಿಲ್ಪಾ ಶ್ರೀನಿವಾಸ್, ಮಾಜಿ ಅಧ್ಯಕ್ಷರಾದ ಎಂ.ಕೆ.ಮಹದೇವು, ಎಂ.ರಾಜು, ಉಪಾಧ್ಯಕ್ಷ ಸಿದ್ಧಲಿಂಗಸ್ವಾಮಿ, ಸದಸ್ಯರಾದ ಮೆಣಸಗೆರೆ ಶಿವಲಿಂಗಯ್ಯ, ಬೊಪ್ಪಸಮುದ್ರ ಅಜಯ್, ರವಿ, ಪಿಡಿಒ ಸತೀಶ್, ಮುಖಂಡರಾದ ಮಧುಸೂದನ್, ದೇವೇಗೌಡನದೊಡ್ಡಿ ಸೋಮ, ರಾಮೇಗೌಡ ಇದ್ದರು.