ಜಿಲ್ಲೆ

ಡಿ.೨೫ ರಿಂದ ಬಂದೂಕಿನಿಂದ ಗುರಿ ಹೊಡೆತ ಸ್ಪರ್ಧೆ ಆರಂಭ

ಮಡಿಕೇರಿ: ಚೇರಂಬಾಣೆ ಗೌಡ ಸಮಾಜ ಮತ್ತು ಕೊಡಗು ಯುವ ವೇದಿಕೆ ವತಿಯಿಂದ ಡಿ.೨೫ ರಿಂದ ಗ್ರಾಮ, ಗ್ರಾಮಗಳ ನಡುವಿನ ಕೊಡಗು ಗೌಡ ಜನಾಂಗದ ಕ್ರಿಕೆಟ್ ಪಂದ್ಯಾವಳಿ ಹಾಗೂ .೨೨ ಮತ್ತು ೧೨ ಬೋರ್ ಬಂದೂಕಿನ ಗುರಿ ಹೊಡೆತ ಸ್ಪರ್ಧೆ ನಡೆಯಲಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಪುರುಷರ ಹಾಗೂ ಮಹಿಳೆಯರ ಮುಕ್ತ ಪಂದ್ಯಾವಳಿ ಇದಾಗಿದ್ದು, ಚೇರಂಬಾಣೆಯ ಅರುಣ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಡಿ೨೫ ರಂದು ಬೆಳಗ್ಗೆ ೯ ಗಂಟೆಗೆ ಚಾಲನೆ ದೊರೆಯಲಿದೆ. ಕ್ರಿಕೆಟ್ ಪಂದ್ಯಾವಳಿಯ ಪ್ರವೇಶ ಶುಲ್ಕ ರೂ೨ ಸಾವಿರ ಆಗಿದ್ದು, ಆಸಕ್ತರು ಡಿ೨೦ ರೊಳಗೆ ರೂ.೫೦೦ ನ್ನು ಮುಂಗಡವಾಗಿ ಪಾವತಿಸಿ ತಮ್ಮ ತಂಡದ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.


ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತರಾದವರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವಾಗಿ ಆಕರ್ಷಕ ನಗದು ಮತ್ತು ಟ್ರೋಫಿಯನ್ನು ನೀಡಲಾಗುವುದು. ಅಲ್ಲದೆ ಪಂದ್ಯಶ್ರೇಷ್ಠ, ಉತ್ತಮ ಎಸೆತಗಾರ, ಉತ್ತಮ ಕ್ಷೇತ್ರ ರಕ್ಷಕ, ಉತ್ತಮ ದಾಂಡಿಗ ಪ್ರಶಸ್ತಿಯನ್ನು ನೀಡಲಾಗುವುದು.


ಹೆಚ್ಚಿನ ಮಾಹಿತಿಗೆ ಕೂರನ ಪ್ರವೀಣ್-೮೭೬೨೮೯೭೧೬೭, ಕಟ್ಟೆಮನೆ ರಾಜೇಶ್-೭೪೮೩೯೭೬೬೨೮, ಕೂಡಕಂಡಿ ಡಾಲಿ-೯೪೮೧೪೮೪೪೦೧ ಹಾಗೂ .೨೨ ಮತ್ತು ೧೨ ಬೋರ್ ಬಂದೂಕಿನ ಗುರಿ ಹೊಡೆತ ಸ್ಪರ್ಧೆಗೆ ಹೆಸರು ನೋಂದಾಯಿಸಲು ಪುದಿಯನೆರವನ ರಿಷಿತ್ ಮಾದಯ್ಯ -೯೯೭೨೩೭೬೧೫೧ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.