ಬೆಂಗಳೂರು: ಶಾಂತವಾಗಿರುವ ಬೆಂಗಳೂರು ಹೊರವಲಯ ಇದೀಗ ಗುಂಡಿನ ಸದ್ದಿಗೆ ಸಾಕ್ಷಿ ಆಗಿದೆ. ಇವರು ರಸ್ತೆ ಬದಿ ನಿಂತಿದ್ದಾಗ ದುಷ್ಕರ್ಮಿಗಳು ಏಕಾಏಕಿ ಬಂದು ಗುಂಡಿನ ದಾಳಿ ನಡೆಸಿ ಎಸ್ಕೇಪ್ ಆಗಿದ್ದಾರೆ. ದುಷ್ಕರ್ಮಿಗಳು ಆಂದ್ರಪ್ರದೇಶದ ಗ್ಯಾಂಗ್ಗೆ ಸಂಬಂಧಪಟ್ಟವರು ಎಂಬ ಶಂಕೆ ವ್ಯಕ್ತವಾಗಿದೆ.
ಕೆ ಆರ್ ಪುರಂನ ಸೀಗೆಹಳ್ಳಿ ಬಳಿಯ ಹ್ಯಾಸ್ಯಗಾರ್ಡನ್ ಬಳಿ ಬಿಲ್ಡರ್ ಅಶೋಕ್ ಹಾಗೂ ಶಿವಾರೆಡ್ಡಿ ಎಂಬುವವರು ರಸ್ತೆ ಬದಿ ಮಧ್ಯಾಹ್ನ ಸುಮಾರು ಮೂರು ಗಂಟೆಗೆ ನಿಂತಿದ್ದರು. ಈ ಸಂದರ್ಭ ದುಷ್ಕರ್ಮಿಗಳು ಬಂದು ಇವರ ಮೇಲೆ ಗುಂಡಿನ ದಾಳಿ ನಡೆಸಿ ಎಸ್ಕೇಪ್ ಆಗಿದ್ದಾರೆ.
ದುಷ್ಕರ್ಮಿಗಳು ಇಬ್ಬರ ಮೇಲೂ ಗುಂಡಿನ ದಾಳಿ ಮಾಡಿದ್ದು ಒಂದು ಗುಂಡು ಅಶೋಕ್ಗೆ ಬಿದ್ದಿದ್ದು ಗಂಭೀರ ಗಾಯಗೊಂಡಿದ್ದಾರೆ. ಜೊತೆಯಲ್ಲಿದ್ದ ಶಿವಾರೆಡ್ಡಿ ಮೇಲೆ ನಾಲ್ಕೈದು ಬಾರಿ ಗುಂಡಿನ ದಾಳಿ ನಡೆಸಲಾಗಿದೆ. ಘಟನೆಯಲ್ಲಿ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಘಟನಾ ಸ್ಥಳಕ್ಕೆ ಕೆ.ಆರ್ ಪುರಂ ಪೊಲೀಸರುಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭ ಬಿಲ್ಡರ್ ಶಿವಶಂಕರ್ ರೆಡ್ಡಿ ಆಂದ್ರದ ಚಿತ್ತೂರು ಮೂಲದವರು ಎಂದು ತಿಳಿದು ಬಂದಿದೆ. ಆಂಧ್ರಪ್ರದೇಶದ ಗ್ಯಾಂಗ್ ಒಂದು ಗುಂಡಿನ ದಾಳಿ ನಡೆಸಿದ ಶಂಕೆ ಹುಟ್ಟಿದ್ದು ಸದ್ಯ ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.