ಯುಎಇಯ ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯ ತುಂಬೆ ಡೆಂಟಲ್ ಹಾಸ್ಪಿಟಲ್ 
ಜಿಲ್ಲೆ

ಗಲ್ಫ್ ಮೆಡಿಕಲ್ ಯೂನಿವರ್ಸಿಟಿ: 120 ಡೆಂಟಲ್ ಚೇರ್‌ಗಳ ತುಂಬೆ ಡೆಂಟಲ್ ಆಸ್ಪತ್ರೆ

ಪ್ರಮುಖ ಮುಖ್ಯಾಂಶಗಳು

  • ಕ್ಲಿನಿಕಲ್ ನಿಪುಣತೆಯನ್ನು ಆಧರಿಸಿ ಅತ್ಯಾಧುನಿಕವಾಗಿ ವಿನ್ಯಾಸ
  • ಯುಎಇಯ ಉನ್ನತ ಶಿಕ್ಷಣ ಮತ್ತು ವೈಜ್ಞಾನಿಕ ಸಂಶೋಧನಾ ಸಚಿವಾಲಯದ ಮಾನ್ಯತೆ
  • 1998ರಲ್ಲಿ ಸ್ಥಾಪನೆಯಾದ ಗಲ್ಫ್ ಮೆಡಿಕಲ್ ಯೂನಿವರ್ಸಿಟಿ
ಮಂಗಳೂರು: ಯುಎಇಯ ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯ "ಕಾಲೇಜ್ ಆಫ್ ಡೆಂಟಿಸ್ಟ್ರಿ" ಕೆಲವೇ ಕೆಲವು ಸಂಸ್ಥೆಗಳು ಹೊಂದಿರುವಂತಹ ಅತ್ಯಾಧುನಿಕ ಶೈಕ್ಷಣಿಕ ವ್ಯವಸ್ಥೆಯನ್ನು ರೂಪಿಸಿದೆ.
ಅಜ್ಮಾನ್‌ನಲ್ಲಿರುವ ವಿಶ್ವವಿದ್ಯಾಲಯದ ಸ್ವಂತ ಮಾನ್ಯತೆ ಪಡೆದ ಬೋಧನಾ ಆಸ್ಪತ್ರೆಯಾದ "ತುಂಬೆ ಡೆಂಟಲ್ ಹಾಸ್ಪಿಟಲ್" ಒಳಗಡೆ 120 ಕ್ಲಿನಿಕಲ್ ಡೆಂಟಲ್ ಚೇರ್‌ಗಳು ಕಾರ್ಯಾಚರಿಸುತ್ತಿವೆ. ಇದನ್ನು ಸಂಪೂರ್ಣವಾಗಿ ಕ್ಲಿನಿಕಲ್ ನಿಪುಣತೆಯನ್ನು ಆಧರಿಸಿ ಅತ್ಯಾಧುನಿಕವಾಗಿ ವಿನ್ಯಾಸಗೊಳಿಸಲಾಗಿದೆ.

ಪ್ರಾಕ್ಟಿಕಲ್ ತರಬೇತಿಗೆ ಹೆಚ್ಚಿನ ಆದ್ಯತೆ

ಡೆಂಟಲ್ ಚೇರ್‌ಗಳ ಲಭ್ಯತೆಯು ಜಾಗತಿಕವಾಗಿ ದಂತ ಶಿಕ್ಷಣದಲ್ಲಿ ಎದುರಾಗುವ ದೊಡ್ಡ ಸವಾಲುಗಳಲ್ಲಿ ಒಂದಾಗಿದೆ. ವಿದ್ಯಾರ್ಥಿಗಳು ಸಿಮ್ಯುಲೇಶನ್ ಹಂತದಿಂದ ಮೇಲ್ವಿಚಾರಣೆಯ ಚಿಕಿತ್ಸೆಯ ಹಂತಕ್ಕೆ ಎಷ್ಟು ಬೇಗ ತಲುಪುತ್ತಾರೆ ಮತ್ತು ಪದವಿ ಪಡೆಯುವ ವೇಳೆಗೆ ಅವರ ಪ್ರಾಯೋಗಿಕ ಅನುಭವ ಎಷ್ಟು ಆಳವಾಗಿರುತ್ತದೆ ಎನ್ನುವುದನ್ನು ಇದು ನಿರ್ಧರಿಸುತ್ತದೆ. ಜಿಎಂಯುನಲ್ಲಿ ವಿಶಾಲವಾದ ಮೂಲಸೌಕರ್ಯ ಇರುವುದರಿಂದ ವಿದ್ಯಾರ್ಥಿಗಳು ಕ್ಲಿನಿಕಲ್ ಸಮಯಕ್ಕಾಗಿ ಕಾಯಬೇಕಾದ ಅಗತ್ಯವಿಲ್ಲ. ತರಬೇತಿಯ ಆರಂಭಿಕ ಹಂತದಿಂದಲೇ ತಜ್ಞರ ಮೇಲ್ವಿಚಾರಣೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ.

ಸುಧಾರಿತ ಸಿಮ್ಯುಲೇಶನ್ ಹಾಗೂ ತಂತ್ರಜ್ಞಾನ

ಕಾಲೇಜು ಪ್ರತ್ಯೇಕ ಪ್ರಿ-ಕ್ಲಿನಿಕಲ್ ಕ್ಲಿನಿಕಲ್ ಸ್ಕಿಲ್ಸ್ ಪ್ರಯೋಗಾಲಯವನ್ನು ನಡೆಸುತ್ತಿದ್ದು, ಇಲ್ಲಿ ಗಾಳಿಯ ಪೂರೈಕೆ ಇರುವ ಫ್ಯಾಂಟಮ್ ಹೆಡ್ ಅಳವಡಿಸಲಾಗಿದೆ. ಈ ಸೌಲಭ್ಯವು ಈಗ ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯ ಸಂಯೋಜಿತ ಕ್ಲಿನಿಕಲ್ ಸ್ಕಿಲ್ಸ್ ಮತ್ತು ಸಿಮ್ಯುಲೇಶನ್ ಸೆಂಟರ್‌ಗಳ ಜಾಲದೊಳಗೆ ಸೇರಿಕೊಂಡಿದೆ. ಇದು 2026ರಲ್ಲಿ ಅಜ್ಮಾನ್ ಕ್ಯಾಂಪಸ್‌ನಲ್ಲಿ ಪ್ರದೇಶದ ಅತ್ಯಂತ ದೊಡ್ಡ ಕೇಂದ್ರವಾಗಿ ಉದ್ಘಾಟನೆಗೊಂಡಿದ್ದು, ಆರು ತರಬೇತಿ ಸೌಲಭ್ಯಗಳನ್ನು ಒಂದೇ ಸೂರಿನಡಿ ತಂದಿದೆ. ಇದರಲ್ಲಿ ಪ್ರತ್ಯೇಕ ಡೆಂಟಲ್ ಸಿಮ್ಯುಲೇಶನ್ ಸೆಂಟರ್ ಮತ್ತು ತುಂಬೆ ಇನ್‌ಸ್ಟಿಟ್ಯೂಟ್ ಆಫ್ ಕ್ಲಿನಿಕಲ್ ಸಿಮ್ಯುಲೇಶನ್ ಸೇರಿವೆ.
ಐದು ವರ್ಷಗಳ ಬ್ಯಾಚಲರ್ ಆಫ್ ಡೆಂಟಲ್ ಸರ್ಜರಿ ತರಬೇತಿಯ ನಂತರ ತುಂಬೆ ಡೆಂಟಲ್ ಹಾಸ್ಪಿಟಲ್‌ನಲ್ಲಿ ಒಂದು ವರ್ಷದ ರಚನಾತ್ಮಕ ಇಂಟರ್ನ್‌ಶಿಪ್ ಇರುತ್ತದೆ. ಪೀರಿಯೋಡಾಂಟಿಕ್ಸ್, ಎಂಡೋಡಾಂಟಿಕ್ಸ್ ಮತ್ತು ಆರ್ಥೋಡಾಂಟಿಕ್ಸ್‌ನಲ್ಲಿ ಮಾಸ್ಟರ್ ಆಫ್ ಡೆಂಟಲ್ ಸರ್ಜರಿ ಕಾರ್ಯಕ್ರಮಗಳು ಹಾಗೂ ಪ್ರತ್ಯೇಕ ರೆಸಿಡೆನ್ಸಿ ಕಾರ್ಯಕ್ರಮಗಳ ಮೂಲಕ ಸ್ನಾತಕೋತ್ತರ ಶಿಕ್ಷಣವನ್ನು ನೀಡಲಾಗುತ್ತದೆ. ಒಬ್ಬನೇ ವಿದ್ಯಾರ್ಥಿಯು ಒಂದೇ ಆಸ್ಪತ್ರೆ ಮತ್ತು ಒಂದೇ ಬೋಧನಾ ವಾತಾವರಣದ ಅಡಿಯಲ್ಲಿ ಪದವಿ, ಇಂಟರ್ನ್‌ಶಿಪ್ ಪೂರ್ಣಗೊಳಿಸಲು ಅವಕಾಶ ಇದೆ.

ಅಂತಾರಾಷ್ಟ್ರೀಯ ಮಾನ್ಯತೆ

ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯ ಡೆಂಟಿಸ್ಟ್ರಿ (ದಂತ ವೈದ್ಯಕೀಯ) ಕಾಲೇಜು 2008ರಲ್ಲಿ ಸ್ಥಾಪನೆಯಾಗಿದ್ದು, ಶಿಕ್ಷಣ, ಸಂಶೋಧನೆ ಮತ್ತು ಆರೋಗ್ಯ ಸೇವೆಗಳಲ್ಲಿ ಅತ್ಯುತ್ತಮ ಕೇಂದ್ರವಾಗಿ ಬೆಳೆದಿದೆ. ಕೌಶಲಾಧಾರಿತ ಬ್ಯಾಚಲರ್ ಆಫ್ ಡೆಂಟಲ್ ಸರ್ಜರಿ ಕೋರ್ಸ್ ಅನ್ನು ಒದಗಿಸುತ್ತಿದೆ. ಈ ಕಾರ್ಯಕ್ರಮವು ಯುಎಇಯ ಉನ್ನತ ಶಿಕ್ಷಣ ಮತ್ತು ವೈಜ್ಞಾನಿಕ ಸಂಶೋಧನಾ ಸಚಿವಾಲಯದ ಮಾನ್ಯತೆ ಹಾಗೂ ಆಸ್ಟ್ರೇಲಿಯನ್ ಡೆಂಟಲ್ ಕೌನ್ಸಿಲ್‌ನಿಂದ ಅಂತಾರಾಷ್ಟ್ರೀಯ ಮಾನ್ಯತೆಯನ್ನು ಪಡೆದುಕೊಂಡಿದೆ.

ಪ್ರವೇಶಾತಿಗಳು ತೆರೆದಿವೆ

1998ರಲ್ಲಿ ಸ್ಥಾಪನೆಯಾದ ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯು ಯುಎಇಯ ಪ್ರಮುಖ ಖಾಸಗಿ ವೈದ್ಯಕೀಯ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದ್ದು, ಇಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಸಂಶೋಧನಾ ಮೂಲಸೌಕರ್ಯ ಮತ್ತು "ಸ್ಟೂಡೆಂಟ್ ಹ್ಯಾಪಿನೆಸ್ ಸೆಂಟರ್" ಇದೆ. ಪ್ರಸ್ತುತ ಎಲ್ಲಾ ಕಾರ್ಯಕ್ರಮಗಳಿಗೂ ಸೀಮಿತ ಸೀಟುಗಳೊಂದಿಗೆ ಪ್ರವೇಶಾತಿಗಳು ತೆರೆದಿದ್ದು, ಹೆಚ್ಚಿನ ವಿವರಗಳು ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿವೆ.