ಜಿಲ್ಲೆ

ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ

ಗುಳೇದಗುಡ್ಡ : ಸಾರ್ವಜನಿಕರು ಯಾವುದೇ ದುಶ್ಚಟಗಳಿಗೆ ದಾಸರಾಗದೆ, ಆರೋಗ್ಯ ಕಾಪಾಡಿಕೊಂಡು ಸಂತಸದ ಜೀವನ ನಡೆಸಬೇಕು ಎಂದು ಹೊಳೆಹುಚ್ಚೇಶ್ವರ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಹೊಳಬಸು ಶೆಟ್ಟರ ಹೇಳಿದರು.

ಇಲ್ಲಿನ ಶಾದಿಮಹಲ್‌ನಲ್ಲಿ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ಹಾಗೂ ಜಾಮಿಯಾ ಮಸೀದಿ ಕಮಿಟಿ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಉಚಿತ ಹೃದಯರೋಗ, ನರರೋಗ, ಮೂತ್ರಪಿಂಡ ತಪಾಸಣೆ ಶಿಬಿರದಲ್ಲಿ ಮಾತನಾಡಿ, ಆರೋಗ್ಯ ಉತ್ತಮವಾಗಿದ್ದರೆ ಮಾತ್ರ ಜೀವನ ಸುಂದರವಾಗಿರುತ್ತದೆ. ಇಂತಹ ಉಚಿತ ಆರೋಗ್ಯ ಶಿಬಿರದಲ್ಲಿ ಸಾರ್ವಜನಿಕರು ಭಾಗವಹಿಸಿ, ಇದರ ಸದುಪಯೋಗ ಪಡೆಯಬೇಕು ಎಂದರು.

ಚೇರ್ಮನ್ ಮಹಿಬೂಬ ಣಿಬಂದ, ಮುಬಾರಕ ಮಂಗಳೂರು, ಅಬ್ದುಲರಜಾಕ್ ಕುದುರಿ, ಸಲೀಂ ಮೊಮಿನ, ಅಮೀನ್ ಬಾಗವಾನ, ಪುರಸಭೆ ಮುಖ್ಯಾಧಿಕಾರಿ ರವೀಂದ್ರ ಅಂಗಡಿ, ಸಂಜಯ ಬರಗುಂಡಿ, ಮಹಿಬೂಬ ಬಾಗವಾನ, ರಫೀಕ್ ಮಂಗಳೂರು ಹಾಗೂ ಸಪ್ತಗಿರಿ ಆಸ್ಪತ್ರೆ ವೈದ್ಯರು ಉಪಸ್ಥಿತರಿದ್ದರು.