ಗುಳೇದಗುಡ್ಡ: ಮಕ್ಕಳನ್ನು ಆಕರ್ಷಿಸಲು ಸಮೀಪದ ಹಾನಾಪುರ ಎಸ್.ಪಿ. ಗ್ರಾಮದ ಸರ್ಕಾರ ಹಿರಿಯ ಪ್ರಾಥಮಿಕ ಶಾಲೆ ಸಿಬ್ಬಂದಿ ಶಾಲೆ ಗೋಡೆಗಳಿಗೆ ರೈಲ್ವೆ ಮಾದರಿ ಬಣ್ಣ ಬಳಿಸಿದ್ದಾರೆ.
ಒಂದರಿಂದ ಏಳನೇ ತರಗತಿವರೆಗೆ ನಡೆಯುವ ಈ ಶಾಲೆಯಲ್ಲಿ ಸದ್ಯ 240 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, 8 ಜನ ವಿಷಯವಾರು ಶಿಕ್ಷಕರಿದ್ದಾರೆ. ಶಾಲೆಯನ್ನು ಆಕರ್ಷಣೆ ಮಾಡುವುದರ ಮೂಲಕ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಗುರಿಯನ್ನು ಅವರು ಹೊಂದಿದ್ದಾರೆ.
ಇಂದಿನ ಪೈಪೋಟಿ ಯುಗದಲ್ಲಿ ಖಾಸಗಿ ಶಾಲೆಗಳತ್ತ ಮುಖಮಾಡಿದ ಪಾಲಕರನ್ನು ಸೆಳೆಯಲು ಸರ್ಕಾರ, ಎಸ್‌ಡಿಎಂಸಿ ಸದಸ್ಯರು, ಶಿಕ್ಷಕರು, ಹಳೆ ವಿದ್ಯಾರ್ಥಿಗಳು ಹಾಗೂ ಗ್ರಾಮದ ಹಿರಿಯರ ಸಹಕಾರದೊಂದಿಗೆ ಇಂಥ ಪ್ರಯೋಗಕ್ಕೆ ಮುಂದಾಗಿದದಾರೆ.
ಗುಣಮಟ್ಟದ ಶಿಕ್ಷಣದೊಂದಿಗೆ ಶಾಲೆ ಪರಿಸರ ಸುಂದರಗೊಳಿಸುವ ಮೂಲಕ ಮಕ್ಕಳು ಹಾಗೂ ಪಾಲಕರು ಸರ್ಕಾರಿ ಶಾಲೆಯತ್ತ ಮುಖಮಾಡುವಂತೆ ಮಾಡಿರುವ ಕಾರ್ಯ ಶ್ಲಾಘನಾರ್ಹ ಎಂದು ಗ್ರಾಮಸ್ಥರು ಹೇಳುತ್ತಾರೆ.
ಮಕ್ಕಳಿಗೆ ಈ ಶಾಲೆಯೇ ರೈಲಾಗಿದೆ. ಗ್ರಾಮೀಣ ಭಾಗದ ಎಷ್ಟೋ ವಿದ್ಯಾರ್ಥಿಗಳಲ್ಲಿನ ರೈಲು, ವ್ಯಂಗ್ಯ ಚಿತ್ರದ ಅರಿವಿನ ಕೊರತೆ ಹೋಗಲಾಡಿಸಲು ಶಾಲೆಗೆ ಇಂಥ ಚಿತ್ರಗಳನ್ನು ಬಿಡಿಸಿ ಮಕ್ಕಳನ್ನು ಸರ್ಕಾರಿ ಶಾಲೆಗೆ ಬರುವಂತೆ ಆಕರ್ಷಿಸಲಾಗುತ್ತಿದೆ.
- ಎಲ್.ಎಂ. ಹುಬ್ಬಳ್ಳಿ ಮುಖ್ಯಶಿಕ್ಷಕ.
ಹಾನಾಪುರ ಎಸ್‌ಪಿ ಗ್ರಾಮದಲ್ಲಿನ ಸರ್ಕಾರಿ ಶಾಲೆ ಗೋಡೆಗೆ ರೈಲಿನ ಚಿತ್ರ ರಚನೆ ಮಾಡಿರುವುದು ನಿಜಕ್ಕೂ ಶ್ಲಾಘನೀಯ. ಈ ರೀತಿ ಮಾಡುವುದರಿಂದ ಶಾಲೆಗಳು ಅಂದವಾಗಿ ಕಾಣಿಸುತ್ತವೆ. ಹೆಚ್ಚು ಮಕ್ಕಳನ್ನು ಆಕರ್ಷಿಸಲು ಸಹಕಾರಿಯಾಗುತ್ತದೆ.
- ರುದ್ರಪ್ಪ ಹುರುಳಿ ಬಿಇಒ, ಬಾದಾಮಿ
StartFragment