ಕೂಡ್ಲಿಗಿಯಲ್ಲಿ ಗುಳೇ ಲಕ್ಕಮ್ಮ ಹಾಗೂ ಊರಮ್ಮ ದೇವಿ ಜಾತ್ರೆ ಪೂರ್ವಭಾವಿ ಸಭೆಯಲ್ಲಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್, ಗ್ರಾಮ ದೇವತೆಯ ಆಯಗಾರರಾದ ಕೆ.ಎಚ್.ವೀರನಗೌಡ, ಹಿ.ಮ.ಚಿದಾನಂದ ಸ್ವಾಮಿ, ಜೋಯಿಸ್ ಹಯವಧನ, ಪಪಂ ಅಧ್ಯಕ್ಷ ಕಾವಲಿ ಶಿವಪ್ಪನಾಯಕ, ಪ್ರಮುಖರಾದ ಉದಯ ಜನ್ನು, ಗುಳುಗಿ ವೀರೇಂದ್ರ, ಬಿ.ಭೀಮೇಶ್, ನಾಗಮಣಿ ಜಿಂಕಾಲ್ ಇದ್ದರು. 
ಜಿಲ್ಲೆ

ಗುಳೇ ಲಕ್ಕಮ್ಮ ಜಾತ್ರೆಯಲ್ಲಿ ಭಕ್ತರಿಗೆ ಅಗತ್ಯ ಸೌಲಭ್ಯ

Kopala - Desk - Eraveni

ಕೂಡ್ಲಿಗಿ: ಪಟ್ಟಣದ ಊರಮ್ಮ ದೇವಿ ಜಾತ್ರೆಯನ್ನು ಅತ್ಯಂತ ಅದ್ದೂರಿಯಾಗಿ ಆಚರಣೆ ಮಾಡಲು ಸಹಕಾರ ನೀಡಲಾಗುವುದು ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.

ಪಟ್ಟಣದ ಊರಮ್ಮ ದೇವಿ ದೇವಸ್ಥಾನದಲ್ಲಿ ಮಂಗಳವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಏ.23ರಂದು ಗುಳೇ ಲಕ್ಕಮ್ಮನ ಜಾತ್ರೆ ಆಯೋಜನೆ ಮಾಡಿರುವ ಭಕ್ತರು, ಆ ನಿಮಿತ್ತ ಒಂದು ದಿನ ಪಟ್ಟಣದ ಹೊರಗಡೆ ಬೀಡು ಬಿಡುವ ಕಾರಣ ಪಟ್ಟಣದಲ್ಲಿ ಯಾವುದೇ ತೊಂದರೆ ಆಗದಂತೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜನೆಗೆ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಅವರಿಗೆ ಸೂಚಿಸಲಾಗುವುದು. ಭಕ್ತರಿಗೆ ಸೌಲಭ್ಯ ಕಲ್ಪಿಸಲು ಪಪಂ ಮುಖ್ಯಾಧಿಕಾರಿ ನಸ್ರುಲ್ಲ ಅವರಿಗೆ ತಿಳಿಸಲಾಗುವುದು ಎಂದರು.

15 ವರ್ಷಗಳ ನಂತರ ಮೇ 22ರಂದು ಜರುಗುವ ಊರಮ್ಮದೇವಿ ಜಾತ್ರೆಯನ್ನು ಅತ್ಯಂತ ಅದ್ದೂರಿಯಾಗಿ ಆಯೋಜಿಸಲು ಬೇಕಾದ ಎಲ್ಲ ವ್ಯವಸ್ಥೆ ಮಾಡಲಾಗುವುದು. ಅಧಿಕಾರಿಗಳ ಜತೆ ಚರ್ಚಿಸಿ ಸೌಲಭ್ಯಗಳನ್ನು ಒದಗಿಸಲಾಗುವುದು. ವಾದ್ಯ ಮೇಳಗಳು ಹಾಗೂ ಕಲಾ ತಂಡದ ಪಟ್ಟಿ ನೀಡಿದರೆ ವ್ಯವಸ್ಥೆ ಮಾಡಲಾಗುವುದು. ಏ.21ರಂದು ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಕರೆದಿದ್ದು ಊರಿನ ಪ್ರಮುಖರು ಸಭೆಗೆ ಆಗಮಿಸಿ ಸಲಹೆ, ಸೂಚನೆ ನೀಡಲು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ತಿಳಿಸಿದರು.

ಗ್ರಾಮ ದೇವತೆಯ ಆಯಗಾರರಾದ ಕೆ.ಎಚ್.ವೀರನಗೌಡ, ಹಿ.ಮ.ಚಿದಾನಂದ ಸ್ವಾಮಿ, ಜೋಯಿಸ್ ಹಯವಧನ, ಪಪಂ ಅಧ್ಯಕ್ಷ ಕಾವಲಿ ಶಿವಪ್ಪನಾಯಕ, ಪ್ರಮುಖರಾದ ಉದಯ ಜನ್ನು, ಗುಳುಗಿ ವೀರೇಂದ್ರ, ಬಿ.ಭೀಮೇಶ್, ನಾಗಮಣಿ ಜಿಂಕಾಲ್, ಸಣ್ಣ ಕೊತ್ಲಪ್ಪ, ಎಂ.ಗುರುಸಿದ್ದನಗೌಡ, ಎಸ್.ಸುರೇಶ್, ಢಾಣಿ ರಾಘವೇಂದ್ರ, ಬಣಕಾರ ಮಂಜುನಾಥ, ಬಿ.ಕೆ.ರಾಘವೇಂದ್ರ, ಕೆ.ಈಶಪ್ಪ, ಎಸ್.ಬಸವರಾಜ, ಎಂ.ಭರಮಣ್ಣ,ಎಚ್.ವೀರಭದ್ರಪ್ಪ, ಬ್ಯಾಳಿ ಪ್ರಸಾದ ಗೌಡ, ಗುರಿಕಾರ ರಾಘವೇಂದ್ರ, ಕಾಟೇರ ಹಾಲೇಶ್ ಇತರರಿದ್ದರು.