ಜಿಲ್ಲೆ

ಕೋಡಿತಲೆ ದೈವಸ್ಥಾನದಲ್ಲಿ ಗೆಂಡಸೇವೆ ಸಂಪನ್ನ

ಕೋಟ: ಸಾಸ್ತಾನದ ಸಮೀಪ ಕೋಡಿತಲೆಯ ಪ್ರಸಿದ್ಧ ದೈವಸ್ಥಾನ ಶ್ರೀ ನಾಲ್ಕುಪಾದ ಹೈಗುಳಿ, ಕೋಳೆರಾಯ ಮತ್ತು ಪರಿವಾರ ದೈವಗಳ ದೈವಸ್ಥಾನದ ವಾರ್ಷಿಕ ಜಾತ್ರೆ ಗೆಂಡ ಸೇವೆ ಗುರುವಾರ ನಡೆಯಿತು.

ಕ್ಷೇತ್ರದಲ್ಲಿ ಪಂಚ ವಿಂಶತಿ ಕಲಶ ಸ್ಥಾಪನೆ, ಅಧಿವಾಸ ಹೋಮ, ಹರಕೆಯ ತುಲಾಭಾರ ಸೇವೆ, ಅನ್ನಸಂತರ್ಪಣೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಪ್ರಧಾನ ಅರ್ಚಕ ಕೊರಗ ಪೂಜಾರಿ ನೇತೃತ್ವದಲ್ಲಿ ನೆರವೇರಿದವು. ತಂತ್ರಿ ರಮೇಶ್ ಭಟ್ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.

ನಾಲ್ಕುಪಾದದ ಹೈಗುಳಿ ಪಾತ್ರಿ ಬೇಡು ಪೂಜಾರಿ, ಕೋಳೆರಾಯನ ಪಾತ್ರಿ ರತ್ನಾಕರ ಕಾರ್ವಿ ದರ್ಶನ ಸೇವೆ ನೆರವೆರಿಸಿದರು. ದೈವಸ್ಥಾನದ ಅಧ್ಯಕ್ಷ ಪದ್ಮನಾಭ ಪೂಜಾರಿ, ಕಾರ್ಯದರ್ಶಿ ಸುರೇಶ್ ಕುಂದರ್ ಐರೋಡಿ, ಮಹಾಬಲ ಕುಂದರ್, ನಿತೀನ್ ಪೂಜಾರಿ, ಭಾಸ್ಕರ್ ಪೂಜಾರಿ, ಕೋಶಾಧಿಕಾರಿ ಅಣ್ಣಪ್ಪ ಕುಂದರ್ ಇದ್ದರು.

ಇಂದು ಗೋಂದೊಳು ಸೇವೆ

ವಾರ್ಷಿಕ ಗೋಂದೊಳು ಪೂಜೆ ಶನಿವಾರ ನಡೆಯಲಿದ್ದು, ಸಂಜೆ 6ರಿಂದ ಆರಂಭಗೊಳ್ಳಲಿದೆ ಎಂದು ದೈವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.