ಜಿಲ್ಲೆ

ವಜ್ರಳ್ಳಿಗೆ ಗುಜರಾತ್ ಪೊಲೀಸ್ ಮಹಾನಿರ್ದೇಶಕ ಕೋಮಾರ ಭೇಟಿ

ಯಲ್ಲಾಪುರ: ಗುಜರಾತ್ ರಾಜ್ಯದ ಪೊಲೀಸ್ ಮಹಾ ನಿರ್ದೇಶಕ ನರಸಿಂಹ ಎನ್. ಕೋಮಾರ ಅವರು ಭಾನುವಾರ ತಾಲೂಕಿನ ವಜ್ರಳ್ಳಿಗೆ ಭೇಟಿ ನೀಡಿದರು. ಮಲ್ಲಾಪುರದಿಂದ ಬೀಗಾರಗೆ ತೆರಳುವ ಮಾರ್ಗಮಧ್ಯೆ ವಜ್ರಳ್ಳಿಗೆ ಭೇಟಿ ನೀಡಿದ ಅವರು, ಸ್ಥಳೀಯರೊಂದಿಗೆ ಕೆಲಕಾಲ ಕುಶಲೋಪರಿ ವಿಚಾರಿಸಿದರು.

ಸ್ಥಳೀಯರಾದ ವಿ.ಎನ್. ಭಟ್ಟ ಬೆಳ್ಳಿ, ಮಹೇಶ ಗಾಂವ್ಕರ ಸಾಂಬೇಕುಂಬ್ರಿ, ಶಂಕರ ಹೆಗಡೆ ಹೊನ್ನಗದ್ದೆ, ಗೋಪಾಲ ಭಟ್ಟ ದುಂಢಿ, ನಾರಾಯಣ ಭಟ್ಟ ಕಲ್ಲಾರೆಮನೆ, ಇತರರಿದ್ದರು. ಮೂಲತಃ ವಜ್ರಳ್ಳಿ ಸಮೀಪದ ಬೀಗಾರಿನವರಾದ ಕೋಮಾರ ಅವರು ಪ್ರಸ್ತುತ ಗುಜರಾತ ರಾಜ್ಯದ ಪೊಲೀಸ್ ಮಹಾನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.