ಯಲಬುರ್ಗಾ: ಅಕ್ಷರ ಆವಿಷ್ಕಾರ ಯೋಜನೆಯಡಿ ಕಾರ್ಯನಿರ್ವಹಿಸುವ ಅತಿಥಿ ಶಿಕ್ಷಕರ ಬಾಕಿ ವೇತನ ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಬಿಇಒ ಅಶೋಕ ಗೌಡರಗೆ ಅತಿಥಿ ಶಿಕ್ಷಕರು ಸೋಮವಾರ ಮನವಿ ಸಲ್ಲಿಸಿದರು.
ಇದನ್ನೂ ಓದಿ: ಅತಿಥಿ ಉಪನ್ಯಾಸಕರ ನೇಮಕಕ್ಕೆ ಒತ್ತಾಯಿಸಿ ಪ್ರತಿಭಟನೆ
ಪ್ರಾಥಮಿಕ ಹಂತದಲ್ಲಿ ಮಕ್ಕಳ ಕಲಿಕಾ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ 2024-25ನೇ ಸಾಲಿನಲ್ಲಿ ಅಕ್ಷರ ಆವಿಷ್ಕಾರ ಯೋಜನೆಯಡಿ ಸರ್ಕಾರಿ ಶಾಲೆಗಳಲ್ಲಿ ಇಸಿಸಿಇ, ಎಲ್‌ಕೆಜಿ, ಯುಕೆಜಿ ಮತ್ತು ಎನ್‌ಎಸ್‌ಕ್ಯುಪಿ ತರಗತಿ ನಡೆಸಲು ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡಿದೆ. ಆದರೆ, ಕಳೆದ 6ತಿಂಗಳಿಂದ ವೇತನ ಪಾವತಿ ಮಾಡಿಲ್ಲ. ಗೌರವಧನಕ್ಕಾಗಿ ಕೆಲಸ ಮಾಡುವವರ ಜೀವನ ನಿರ್ವಹಣೆಗೆ ತೊಂದರೆಯಾಗಿದೆ. ಅಲ್ಲದೆ, ಸಾಲ ಮಾಡಿ ಕುಟುಂಬ ಸಾಗಿಸಬೇಕಾಗಿದೆ.
ಬಾಕಿ ವೇತನ ಜಮೆಯಾಗುವ ಭರವಸೆಯಲ್ಲಿ ಜೀವನ ಕಳೆಯುವಂತಾಗಿದೆ. ಈ ಕುರಿತು ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ರೀತಿ ಸ್ಪಂದನೆ ಸಿಕ್ಕಿಲ್ಲ. ಇನ್ನಾದರೂ ವೇತನ ಪಾವತಿ ಮಾಡಲು ಮುಂದಾಗಬೇಕು. ಇಲ್ಲವಾದರೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸಲಾಗುವುದು ಎಂದು ಆಗ್ರಹಿಸಿದರು. ಅತಿಥಿ ಶಿಕ್ಷಕರಾದ ಶಬಾನಾ, ಹನುಮೇಶ, ಮಲ್ಲಿಕ್‌ಸಾಬ್, ವಸಂತ, ಅಶ್ವಿನಿ.ಕೆ., ರಾಧಿಕಾ, ಸುಮಿತ್ರಾ, ಮಂಜುಳಾ, ಮಹಾದೇವಿ, ರಮೇಶ ಜಿಗಳೂರು, ಶಶಿಕಲಾ, ಭಗೀರತಿ, ರೇಣುಕಾ, ಶೈಲಾ ಇತರರಿದ್ದರು.
1ವೈಎಲ್‌ಬಿ2)