ಕುಂದಗೋಳ:ತಾಲೂಕಿನ ಗುಡಗೇರಿ ಗ್ರಾಪಂ ಸಭಾಭವನದಲ್ಲಿ ರೇಡಾನ್ ಕ್ಯಾನ್ಸರ್ ಫೌಂಡೇಶನ್ ಸಹಯೋಗದೊಂದಿಗೆ ಹುಬ್ಬಳ್ಳಿಯ ಬ್ಲಿಂಗ್ಡೆಯ ಇನ್ನರ್‌ವೀಲ್ ಕ್ಲಬ್ ವತಿಯಿಂದ ಲಸಿಕೆ ಅಭಿಯಾನ ನಡೆಯಿತು. ಈ ವೇಳೆ ಗ್ರಾಮದ ವಿವಿಧ ಶಾಲೆಗಳ 9 ರಿಂದ 14 ವರ್ಷದೂಳಗಿನ 68 ಬಾಲಕಿಯರಿಗೆ ಗರ್ಭ ಕಂಠದ ಕ್ಯಾನ್ಸರ್ ಲಸಿಕೆ ಹಾಕಲಾಯಿತು. ಈ ಸಂದರ್ಭದಲ್ಲಿ ಎಫ್.ಎಸ್.ಬೆಂಗೇರಿ, ಜಿ.ಸಿ ರಟ್ಟಿಗೇರಿಮಠ, ವಿರುಪಾಕ್ಷಗೌಡ ರಂಗನಗೌಡ್ರ, ಶಿವಪ್ಪ ಬಡ್ನಿ, ಸೋಮಣ್ಣ ಕಾಕಂಬಿ, ರೇಡಾನ್ ಕ್ಯಾನ್ಸರ್ ಕೇಂದ್ರದ ಅಧ್ಯಕ್ಷೆ ಶೀಲಾ ಭೂಸದ, ಡಾ.ಶೀತಲ್ ಕುಲ್ಗೋಡ, ಡಾ. ಕೇಲ್ಕೆ ಕುಲಕರ್ಣಿ ಇತರರಿದ್ದರು.