ಜಿಲ್ಲೆ

ಗುಡ್ಡೆಹೊಸೂರು ಪಂಚಾಯಿತಿಯಿ0ದ ಸ್ವಚ್ಛತೆ

ಸುನಿಲ್ ಪೊನ್ನೇಟಿ

ಕುಶಾಲನಗರ:

ಸ್ವಚ್ಛ ಕೊಡಗು ಸುಂದರ ಕೊಡಗು ಕಾರ್ಯಕ್ರಮದ ಭಾಗವಾಗಿ ಗುಡ್ಡೆಹೊಸೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗುಡ್ಡೆಹೊಸೂರು ಗ್ರಾಮ ಪಂಚಾಯತ್ ಸಹಯೋಗದೊಂದಿಗೆ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೌಮ್ಯಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಗುಡ್ಡೆ ಹೊಸೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಿಸರ್ಗಧಾಮ ಮುಂಭಾಗ, ಗುಡ್ಡೆಹೊಸೂರು ಜಂಕ್ಷನ್‌ನಿAದ ಚಿಕ್ಕಬೆಟಗೆರಿ, ಹಾರಂಗಿ ರಸ್ತೆ, ಗುಡ್ಡೆಹೊಸೂರು ಜಂಕ್ಷನ್‌ನಿAದ ಬಸವನಹಳ್ಳಿ, ಆನೆಕಾಡು ತನಕ ನಡೆದ ಸ್ವಚ್ಛತಾ ಕಾರ್ಯದಲ್ಲಿ ಈ ವ್ಯಾಪ್ತಿಯ ರೆಸಾರ್ಟ್, ಹೋಟೇಲ್ ಉದ್ಯೋಗಿಗಳು ಭಾಗವಹಿಸಿದ್ದರು.

ಉಪಾಧ್ಯಕ್ಷ ಪ್ರವೀಣ್, ಪಿಡಿಒ ಎಂ.ಆರ್. ಸುಮೇಶ್, ಸದಸ್ಯರಾದ ಮಾದಪ್ಪ, ನಿತ್ಯಾನಂದ, ಪ್ರದೀಪ್, ರಮೇಶ್ ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರು ಈ ಸಂದರ್ಭ ಇದ್ದರು.