ಜಿಲ್ಲೆ

ಗುಡ್ಡಳ್ಳಿಗೆ ವ್ಯವಸ್ಥಿತ ರಸ್ತೆ ಕನಸು..?

Uttara Kannada - Subash Hegde

ಕಾರವಾರ: ನಗರಸಭೆ ವ್ಯಾಪ್ತಿಯಲ್ಲೇ ಇರುವ ಗುಡ್ಡಳ್ಳಿ ಎಂಬ ಕುಗ್ರಾಮಕ್ಕೆ ಸುಸಜ್ಜಿತ ರಸ್ತೆ ಕನಸಾಗಿದೆ. ಊರಿಗೆ ಸಿಸಿ ರಸ್ತೆ ನಿರ್ಮಾಣಕ್ಕೆ ನಗರಸಭೆ ಹಾಗೂ ಜಿಲ್ಲಾಡಳಿತ ಈಗ ಎನ್‌ಪಿಸಿಐಎಲ್ ಮೊರೆ ಹೋಗಿದೆ. ಗುಡ್ಡಳ್ಳಿಗೆ ಕಾಂಕ್ರಿಟ್ ರಸ್ತೆ ಮಾಡಲು ಸುಮಾರು 2 ಕೋಟಿ ರೂ. ತಗಲಲಿದ್ದು, ಅದಕ್ಕೆ ಕೈಗಾದ ಅಣು ವಿದ್ಯುತ್ ಯೋಜನೆಯ ಸಾಮಾಜಿಕ ಜವಾಬ್ದಾರಿ ನಿಧಿಯಲ್ಲಿ ಹಣ ಒದಗಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೈಗಾ ಅಽಕಾರಿಗಳು ಸ್ಥಳ ಪರಿಶೀಲನೆಯನ್ನೂ ನಡೆಸಿದ್ದಾರೆ. ಆದರೆ, ರಸ್ತೆ ವಿಚಾರದಲ್ಲಿ ವಿವಾದ ಇರುವುದರಿಂದ ಅನುದಾನ ಮಂಜೂರಿಗೆ ಕೈಗಾ ಅಧಿಕಾರಿಗಳು ಹಿಂದೇಟು ಹಾಕಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಗರದ ಹೈಚರ್ಚ್ನಿಂದ ಸುಮಾರು 4 ಕಿಮೀ ಗುಡ್ಡದ ಮೇಲೆ ಊರಿದೆ. ಅಲ್ಲಿ 30 ಕ್ಕೂ ಅಽಕ ಕುಟುಂಬಗಳಿದ್ದು, ತೆರಳಲು ಸುಸಜ್ಜಿತ ರಸ್ತೆ ಇಲ್ಲ. ಹಿಂದೆಲ್ಲ ಗ್ರಾಮಸ್ಥರು ಕಾಲು ಹಾದಿಯಲ್ಲೇ ನಡೆದೇ ಸಾಗುತ್ತಿದ್ದರು. ಸಾಕಷ್ಟು ಪ್ರಯತ್ನದ ನಂತರ ಕೆಲ ವರ್ಷಗಳ ಹಿಂದೆ ಗುಡ್ಡಳ್ಳಿಗೆ ಎಲ್ಲ ಅವಧಿಯಲ್ಲಿ ಬೈಕ್ ತೆರಳುವ ವ್ಯವಸ್ಥೆಯಾಗಿತ್ತು. ಬೇಸಿಗೆಯಲ್ಲಿ ನಾಲ್ಕು ಚಕ್ರದ ವಾಹನಗಳು ಊರಿನವರೆಗೂ ತಲುಪುತ್ತಿದ್ದವು. ಆದರೆ, ಕಳೆದ ವರ್ಷ ನಡೆಸಿದ ರಸ್ತೆ ಕಾಮಗಾರಿ ಊರಿಗೆ ವಾಹನ ಸಂಪರ್ಕವನ್ನು ಮತ್ತೆ ಸಂಪೂರ್ಣ ಬಂದ್ ಮಾಡಿದೆ.

ಕಾಮಗಾರಿಯಿಂದ ಸಮಸ್ಯೆ:

2024 ರಲ್ಲಿ ಲೋಕೋಪಯೋಗಿ ಇಲಾಖೆಯಿಂದ 50 ಲಕ್ಷ ರೂ. ವೆಚ್ಚದಲ್ಲಿ ಊರಿಗೆ ರಸ್ತೆ ಕಾಮಗಾರಿ ಕೈಗೊಳ್ಳಲಾಗಿತ್ತು. 1.24 ಮೀಟರ್ ಮೆಟ್ಲಿಂಗ್ ಮಾಡಿ, ಕಚ್ಚಾ ಚರಂಡಿ ನಿರ್ಮಾಣ ಮಾಡುವ ಕಾಮಗಾರಿ ಅದಾಗಿತ್ತು.ಆದರೆ, ಗುತ್ತಿಗೆದಾರರು ಕಾಮಗಾರಿ ಸರಿಯಾಗಿ ಮಾಡಿಲ್ಲ. ಮೆಟ್ಲಿಂಗ್ ಕೂಡ ಸರಿಯಾಗಿ ಮಾಡಿಲ್ಲ. ಕಾರಣ ರಸ್ತೆ ಇನ್ನಷ್ಟು ಹಾಳಾಗಿದೆ ಎಂಬುದು ಗ್ರಾಮಸ್ಥರು ಹಾಗೂ ನಗರಸಭೆಯ ಆರೊಪ. ರಸ್ತೆ ಕಾಮಗಾರಿ ಮಾಡಿದ ನಂತರ ವಾಹನ ಓಡಾಟ ಸಂಪೂರ್ಣವಾಗಿ ನಿಲ್ಲಿಸಬೇಕಾಯಿತು ಎಂದು ಗ್ರಾಮಸ್ಥರು ಗೋಳು ತೋಡಿಕೊಳ್ಳುತ್ತಾರೆ. ಈ ಸಂಬAಧ ಜಿಲ್ಲಾಽಕಾರಿ ಅವರು ತನಿಖೆ ನಡೆಸಲು ಸಮಿತಿಯೊಂದನ್ನು ರಚನೆ ಮಾಡಿದ್ದರು. ಸಮಿತಿಯು ಗುತ್ತಿಗೆದಾರರಿಗೆ ಕ್ಲೀನ್ ಚಿಟ್ ನೀಡಿದೆ. ಆದರೆ, ಗ್ರಾಮಸ್ಥರ ಗೋಳಿಗೆ ಪರಿಹಾರ ದೊರೆಯದಾಗಿದೆ.

ವಾಹನ ವ್ಯವಸ್ಥೆಯೂ ಬಂದ್

ಗ್ರಾಮಸ್ಥರು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರ ಬಳಿ ಬಂದು ಸಮಸ್ಯೆ ತೋಡಿಕೊಂಡಿದ್ದರು. ನಂತರ ಜಿಲ್ಲಾಧಿಕಾರಿ ಅವರು ಗುಡ್ಡಳ್ಳಿಗೆ ಭೇಟಿ ನೀಡಿ ಪರಿಶೀಲಿಸಿದ್ದರು. ತುರ್ತಾಗಿ ಜನರ ಓಡಾಟಕ್ಕೆ ನಗರಸಭೆಯಿಂದ ವಾಹನ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದರು. ಅದರಂತೆ ಬೇಸಿಗೆಯಲ್ಲಿ ಪ್ರತಿ ದಿನ ವಾಹನ ಊರಿಗೆ ಹೋಗಿ ಬರಲಾರಂಭಿಸಿತು. ಮಳೆಗಾಲ ಶುರುವಾರ ನಂತರ ರಸ್ತೆ ಸಂಪೂರ್ಣ ಕೊಚ್ಚಿ ಹೋಗಿದ್ದು, ವಾಹನವೂ ಊರಿಗೆ ತಲುಪದಾಗಿದೆ.

ಜೋಲಿಯೇ ಗತಿ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಇದೆ. ಅದಕ್ಕೆ ಶಿಕ್ಷಕಿ ಕಾರವಾರದಿಂದ ನಿತ್ಯವೂ ನಡೆದೇ ಸಾಗುತ್ತಾರೆ. ಹೈಸ್ಕೂಲ್ ಹಾಗೂ ಕಾಲೇಜ್‌ಗೆ ಬರುವ 6 ವಿದ್ಯಾರ್ಥಿಗಳಿದ್ದು, ಅವರೂ ನಿತ್ಯ ಗುಡ್ಡ ಹತ್ತಿಳಿಯುತ್ತಾರೆ. ಗುಡ್ಡಳ್ಳಿಯಲ್ಲಿ ಯಾರಿಗಾದರೂ ಅನಾರೋಗ್ಯ ಉಂಟಾದರೆ ಅವರನ್ನು ಜೋಲಿಯಲ್ಲಿ ಹೊತ್ತು ತರುವುದು ಅನಿವಾರ್ಯವಾಗಿದೆ. ಮಳೆಯಿಂದ ರಸ್ತೆ ವ್ಯವಸ್ಥೆ ಇನ್ನಷ್ಟು ಹದಗೆಟ್ಟಿದೆ. ಮಳೆ ಕಡಿಮೆಯಾದ ನಂತರ ನಗರಸಭೆಯಿಂದ ರಸ್ತೆಯನ್ನು ದುರಸ್ತಿ ಮಾಡಲು ಮನವಿ ಮಾಡಲಾಗಿದೆ ಎನ್ನುತ್ತಾರೆ ವಾರ್ಡ್ ಸದಸ್ಯೆ ರುಕ್ಮಿಣಿ ಗೌಡ.

ನಗರಸಭೆ ಅಧ್ಯಕ್ಷರವಿರಾಜ ಅಂಕೋಲೆಕರ್ ಗುಡ್ಡಳ್ಳಿ ರಸ್ತೆ ಕಾಮಗಾರಿ ಕಳಪೆಯಾಗಿದೆ. ಮೊದಲು ಸಿಸಿ ರಸ್ತೆ ಎಂದು ಹೇಳಿದ್ದರು. ಆದರೆ, ನಂತರ ಸಿಸಿ ರಸ್ತೆ ಮಾಡುವ ಯೋಜನೆ ಇಲ್ಲ. ಮೆಟ್ಲಿಂಗ್ ಮಾತ್ರ ಇದೆ ಎಂದು ಲೋಕೋಪಯೋಗಿ ಇಲಾಖೆ ಅಽಕಾರಿಗಳು ಹೇಳುತ್ತಿದ್ದಾರೆ. ಮೆಟ್ಲಿಂಗ್ ಕೂಡ ಸರಿಯಾಗಿ ಮಾಡಿಲ್ಲ. ಅದಕ್ಕೆ ಲೋಕಾಯುಕ್ತಕ್ಕೆ ದೂರು ನೀಡಲು ನಿರ್ಧರಿಸಲಾಗಿದೆ. ..............ಜಿಲ್ಲಾಧಿಕಾರಿ, ಉತ್ತರ ಕನ್ನಡಕೆ.ಲಕ್ಷ್ಮೀಪ್ರಿಯಾಗುಡ್ಡಳ್ಳಿ ರಸ್ತೆ ಕಾಮಗಾರಿ ಎಷ್ಟಿಮೇಟ್‌ನಂತೆ ಆಗಿದೆ ಎಂದು ತನಿಖಾ ಸಮಿತಿ ವರದಿ ನೀಡಿದೆ. ಮಳೆಯಿಂದ ರಸ್ತೆ ಕೊಚ್ಚಿ ಹೋಗಿದೆ. ಅಲ್ಲಿ ಸಿಸಿ ರಸ್ತೆ ಮಾಡಬೇಕಿದೆ. ಅದಕ್ಕೆ ಬೇಕಾಗುವಷ್ಟು ಅನುದಾನವಿಲ್ಲ. ಇದರಿಂದ ರಸ್ತೆ ಕಾಮಗಾರಿಗೆ ಅನುದಾನ ನೀಡುವಂತೆ ಎನ್‌ಪಿಸಿಐಎಲ್‌ಗೆ ಬರೆಯಲಾಗಿದೆ.