ಜಿಲ್ಲೆ

ರಸ್ತೆ ಅಗಲೀಕರಣಕ್ಕೆ ಸ್ಥಳೀಯರ ಸಹಕಾರ : ಶಾಸಕಿ ಭಾಗೀರಥಿ ಮುರುಳ್ಯ

ಸೌಮ್ಯ ಆರ್

ಸುಳ್ಯ: ರಸ್ತೆ ಅಗಲೀಕರಣಗೊಂಡು ಸಂಚಾರ ಸುಗಮವಾಗಬೇಕಾದರೆ ರಸ್ತೆ ಬದಿಯ ನಿವಾಸಿಗಳು ಜಾಗ ಬಿಟ್ಟುಕೊಟ್ಟು ಸಹಕರಿಸಬೇಕು ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.

ಬೆಳ್ಳಾರೆ ದರ್ಖಾಸ್ತು ರಸ್ತೆ ಅಗಲೀಕರಣ ಮತ್ತು ಡಾಂಬರೀಕರಣಕ್ಕೆ ಬೆಳ್ಳಾರೆಯಲ್ಲಿ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

ಬೆಳ್ಳಾರೆ ಗ್ರಾಪಂ ಅಧ್ಯಕ್ಷೆ ನಮಿತಾ ಎಲ್.ರೈ, ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಎಸ್.ಎನ್.ಮನ್ಮಥ, ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್

ವಳಲಂಬೆ, ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯ.ಸ.ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು, ಪದ್ಮನಾಭ ಬೀಡು, ಶ್ರೀನಾಥ್ ರೈ ಬಾಳಿಲ, ಗಂಗಾಧರ ರೈ ಪುಡ್ಕಜೆ, ಬಾಳಿಲ ಗ್ರಾ.ಪಂ. ಸದಸ್ಯ ಶ್ರೀನಾಥ ರೈ ಬಾಳಿಲ, ಗ್ರಾ.ಪಂ. ಸದಸ್ಯ ದಿನೇಶ್ಚಂದ್ರ, ಭವ್ಯಾ, ಶೇಖರ ಮಡ್ತಿಲ, ನಂದಕುಮಾರ್ ಬಾರೆತ್ತಡ್ಕ, ಕಿಶನ್ ಜಬಳೆ, ಆರೀಫ್ ಬೆಳ್ಳಾರೆ, ಕುಶಾಲಪ್ಪ ಪೆರುವಾಜೆ, ಮಹಾಬಲ ಕಲ್ಲೋಣಿ, ಶ್ರೀಧರ್ ಬೆಳ್ಳಾರೆ, ಎ.ಇ.ಇ.ಗೋಪಾಲ್, ಎ.ಇ. ಪರಮೇಶ್ವರ್, ಕಾಂಟ್ರಾಕ್ಟರ್ ಶಾಂತಾರಾಮ ಕಣಿಲೆಗುಂಡಿ, ವಸಂತ ನಡುಬೈಲು, ಪ್ರಭಾಕರ ಕುತ್ಯಾಡಿ, ಜಯರಾಮ ಉಮಿಕ್ಕಳ, ಶ್ರೀಧರ ದೊಡ್ಡಮನೆ ಹಾಗೂ ಬೆಳ್ಳಾರೆ ರಿಕ್ಷಾ ಚಾಲಕರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಬೆಳ್ಳಾರೆ ಗ್ರಾಪಂ ಸದಸ್ಯ ಚಂದ್ರಶೇಖರ ಪನ್ನೆ ಸ್ವಾಗತಿಸಿ, ವಂದಿಸಿದರು. ಅಜಿತ್ ರಾವ್ ಕಿಲಂಗೋಡಿ ಕಾರ್ಯಕ್ರಮ ನಿರೂಪಿಸಿದರು.