ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಹುಕ್ಕೇರಿ ತಾಲೂಕಿನ ಗುಡಸ ಗ್ರಾಮದಲ್ಲಿರುವ ಗಾಯರಾಣ ಜಾಗಯ ಅತಿಕ್ರಮಣ ತೆರವುಗೊಳಿಸಿ ಕುರಿ ಮೇಯಿಸಲು ಒದಗಿಸುವಂತೆ ಆಗ್ರಹಿಸಿ ಗುರುವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ವಿವಿಧ ಗ್ರಾಮಗಳ ಕುರಿಗಾಹಿಗಳು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಗುಡಸ ಗ್ರಾಮದಲ್ಲಿ ಕುರಿ ಮೇಯಿಸಲು ಮೀಸಲಾಗಿದ್ದ ಗಾಯರಾಣ ಜಾಗಯನ್ನು ಅತಿಕ್ರಮಣ ಮಾಡಿರುವುದನ್ನು ತೆರವುಗೊಳಿಸಿ ಜಾಗ ಹಸ್ತಾಂತರಿಸಬೇಕು. ಗಾಯರಾಣ ಜಾಗ ಖಾಸಗಿ ವ್ಯಕ್ತಿಗಳಿಗೆ ಹಸ್ತಾಂತರಿಸಲು ಮುಂದಾಗಿರುವ ಕಂದಾಯ ವಿಭಾಗದ ಅಧಿಕಾರಿಗಳ ವಿರುದ್ಧ ತ್ವರಿತವಾಗಿ ಕಠಿಣ ಕ್ರಮ ಜರುಗಿಸಬೇಕು. ಒತ್ತುವರಿ ತೆರವುಗೊಳಿಸಲು ಉದಾಸೀನ ಮಾಡುತ್ತಿರುವ ಕ್ರಮ ಖಂಡಿಸಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬಸಪ್ಪ ವಂಟಮೂರಿ, ರಾಯಪ್ಪ ಪಾಮಲದಿನ್ನಿ, ಆನಂದ ಖಿಲಾರಿ, ಗುರುಸಿದ್ಧ ಗೋಟುರ, ಹಾಲಪ್ಪ ನೂಲಿ, ಬಸವಣ್ಣಿ ನಿಡಸೋಸಿ ಇತರರಿದ್ದರು.