ಮುಧೋಳದ ಮುಧೋಳದ ಹಳೆ ತಹಶೀಲ್ದಾರ್ ಕಚೇರಿಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ತಾಲ್ಲೂಕು ಸಮಿತಿ ಕಚೇರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಉದ್ಘಾಟಿಸಿದರು. ತಹಶೀಲ್ದಾರ್ ಮಹಾದೇವ ಸಣಮುರಿ, ನಗರಸಭೆ ಅಧ್ಯಕ್ಷೆ ಸುನಂದಾ ತೇಲಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ಜಿ.ಪಂ ಮಾಜಿ ಅಧ್ಯಕ್ಷ ಶಿವಕುಮಾರ ಮಲಘಾಣ, ಮಾಜಿ ಸದಸ್ಯ ಕೆ.ಟಿ.ಪಾಟೀಲ, ಶಿವಪ್ಪ ಡೊಳ್ಳಿ, ಇದ್ದರು. 
ಜಿಲ್ಲೆ

ಗ್ಯಾರಂಟಿಯಿಂದ ಜನರು ಆರ್ಥಿಕ ಸದೃಢ: ತಿಮ್ಮಾಪೂರ

ದತ್ತಾತ್ರೇಯ ಪಿ ಕುಲಕರ್ಣಿ

ಮುಧೋಳ: ಸರ್ಕಾರದ ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆದು ಲಕ್ಷಾಂತರ ಜನರು ಆರ್ಥಿಕ ಸದೃಢತೆ ಹೊಂದಿದ್ದಾರೆ. ಆರ್ಥಿಕವಾಗಿ ಸಬಲವಾಗಿರುವ ಕುಟುಂಬಗಳು ಗ್ಯಾರಂಟಿ ಯೋಜನೆಯನ್ನು ಸ್ವಇಚ್ಛೆಯಿಂದ ಬಿಡಬೇಕು ಎಂದು ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.

ನಗರದ ಹಳೆ ತಹಶೀಲ್ದಾರ್ ಕಚೇರಿಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ತಾಲ್ಲೂಕು ಸಮಿತಿ ಕಚೇರಿ ಯನ್ನು ಶುಕ್ರವಾರ ಉದ್ಘಾಟಿಸಿ, ಶ್ರೀಮಂತರು ಅವಶ್ಯಕತೆ ಇರುವುವವರಿಗೆ ಅವಕಾಶ ನೀಡಲು ಮುಂದೆ ಬರಬೇಕು ಎಂದರು.

ತಾಂತ್ರಿಕ, ಯುವ ಪದವೀಧರರು ಉದ್ಯೋಗ ಪಡೆಯುವವರೆಗೆ ವಿದ್ಯಾರ್ಥಿ ವೇತನವನ್ನು ಯಾವ ರೀತಿ ಪಡೆಯ ಬಹುದು ಎಂಬುದನ್ನು ವಿವರಿಸಿದರು.

ತಹಶೀಲ್ದಾರ್ ಮಹಾದೇವ ಸಣಮುರಿ,ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಕುಮಾರ ಮಲಘಾಣ, ನಗರಸಭೆ ಅಧ್ಯಕ್ಷೆ ಸುನಂದಾ ತೇಲಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ಮಾಜಿ ಸದಸ್ಯ ಕೆ.ಟಿ.ಪಾಟೀಲ, ಶಿವಪ್ಪ ಡೊಳ್ಳಿ, ಇದ್ದರು.