ಜಿಲ್ಲೆ

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆ

Dharwada - Basavaraj Idli

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪೂರ್ವ ಹಾಗೂ ಸೆಂಟ್ರಲ್ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯು ಪಾಲಿಕೆ ಸಭಾಂಗಣದಲ್ಲಿ ಬುಧವಾರ ನಡೆಯಿತು.

ಸಮಿತಿ ಅಧ್ಯಕ್ಷರಾದ ಅಬ್ದುಲ್ ರಶೀದ ಬೋಲಾಭಾಯಿ, ಅಬ್ದುಲ್ಗಣಿ ವಲಿ ಅಹ್ಮದ, ಪಾಲಿಕೆ ಉಪ ಆಯುಕ್ತ ಆನಂದ ಕಲ್ಲೋಳಿಕರ ಅವರ ನೇತೃತ್ವದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಯೋಜನೆಗಳ ಸುಗಮ ಜಾರಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.

ಗೃಹಲಕ್ಷ್ಮಿ ಯೋಜನೆ ಪ್ರಯೋಜನೆಗಳನ್ನು ಪಡೆಯುತ್ತಿರುವ ಫಲಾನುಭವಿ ಮರಣ ಹೊಂದಿದರೆ ಮರಣ ಪ್ರಮಾಣ ಪತ್ರ ನೀಡಿ ಎರಡನೇ ಯಜಮಾನಿ ಹೆಸರಿನಲ್ಲಿ ಹೊಸ ಅರ್ಜಿ ಹಾಕಬೇಕು, ಆದಾಯ ತೆರಿಗೆ, ಕಂದಾಯ, ಆಹಾರ ಇಲಾಖೆ ಅಧಿಕಾರಿಗಳ ಸಮನ್ವಯದೊಂದಿಗೆ ಈ ಯೋಜನೆಯ ಫಲಾನುಭವಿ ಆಯ್ಕೆ ಮಾಡಬೇಕು.

ಗ್ಯಾರಂಟಿ ಯೋಜನೆ ಕಚೇರಿಗಳಲ್ಲಿ ಆನ್ ಲೈನ್ ಅರ್ಜಿಗೆ ಲಾಗಿನ್ ಸ್ಟೇಟಸ್ ನೋಡಲು ಅವಕಾಶ ಕಲ್ಪಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು.
ಶೌಚಗೃಹ ದಿನಾಚರಣೆ ಕಾರ್ಯಕ್ರಮವನ್ನು ವಲಯವಾರು ಆಚರಣೆ ಮಾಡುವುದು.

ಶಕ್ತಿಯೋಜನೆ ಅಡಿ ನಗರ ಸಾರಿಗೆ ಬಸ್ ಗಳಲ್ಲಿ ಮಹಿಳೆಯರು ತಮ್ಮ ಮೊಬೈಲ್ನಲ್ಲಿ ಆಧಾರ್ ಕಾರ್ಡ್ ತೋರಿಸಿ ಟಿಕೇಟ್ ಕೇಳಿದಿರೆ ಕಂಡಕ್ಟರ್ ಗಳು ನೀಡಲು ಸೂಚಿಸಲಾಯಿತು.

ನ್ಯಾಯ ಬೆಲೆ ಅಂಗಡಿಯವರೊಂದಿಗೆ ಸಭೆ ನಡೆಸಬೇಕು. ಬಿಪಿಎಲ್ ಅರ್ಹರಿಗೆ ಮಾತ್ರ. ಅನರ್ಹರನ್ನು ಪತ್ತೆ ಮಾಡಿ ರದ್ದುಪಡಿಸಲು ಸೂಚಿಸಲಾಯಿತು.

ಗೃಹ ಜ್ಯೋತಿ ಯೋಜನೆಯಡಿ ಸಾರ್ವಜನಿಕರು ಹಳೇ ಮೀಟರ್ ತೆಗೆದು ಹೊಸ ಮೀಟರ್ ಅಳವಡಿಸಿದಾಗ ಹೆಚ್ಚು ಬಿಲ್ ಬರುತ್ತಿದ್ದು, ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು.

ವಾರ್ಡ್ ನಲ್ಲಿ ಸಭೆ ನಡೆಸಿ ನಿರುದ್ಯೋಗಿ ಯುವಕ/ಯುವತಿಯರಿಗೆ ಯುವನಿಧಿ ಸೌಲಭ್ಯ ಒದಗಿಸಲು ಸಭೆಯಲ್ಲಿ ಸೂಚಿಸಲಾಯಿತು.

ಅನುಷ್ಠಾನ ಸಮಿತಿ ಸದಸ್ಯರಾದ ವೀರಭದ್ರಯ್ಯ ಹಿರೇಹಾಳ, ವಾದಿರಾಜ ಕುಲಕರ್ಣಿ, ದಾವಲಸಾಬ ನದಾ, ಇಮ್ರಾನ ಸಿದ್ದಿಕ್, ಕ್ಕಣ್ಣ ದೊಡ್ಡಮನಿ, ನಾಗಾರ್ಜುನ ಕತ್ರಿಮಲ್, ಯಲ್ಲಪ್ಪ ಮೆಹರವಾಡೆ, ರಾಹುಲ್ ಬೆಳದಡಿ, ನದಿಂ ಆಚಮಟ್ಟಿ, ಇನಾಯತ್ ಖಾನ ಪಠಾಣ, ಪ್ರವಿಣ ಶೆಲೂಡಿ, ಸಂತೋಷ ನಾಯ್ಕ, ಅಬ್ದುಲ ಅಜೀಜ ಮುಲ್ಲಾ, ಲಕ್ಷ$್ಮಣ ಗುಡ್ಡಿ, ಬಾಳಮ್ಮ ಜಂಗಣ್ಣವರ, ಕಲಾವತಿ ದತ್ತವಾಡ ಇತರರು ಪಾಲ್ಗೊಂಡಿದ್ದರು.