ತಾಳಿಕೋಟೆ: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಬಡವರಿಗೆ ಅನುಕೂಲವಾಗಿದೆ ಎಂದು ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಮತ್ತು ಮೇಲ್ವಿಚಾರಣಾ ಸಮಿತಿ ಅಧ್ಯ ಸಂಗಮೇಶ ದೇಸಾಯಿ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಯಿಂದ ಮಹಿಳೆಯರಿಗೆ ಉಚಿತ ಬಸ್ ಸಂಚಾರದ ವ್ಯವಸ್ಥೆ ಸಿಕ್ಕಿದೆ ಎಂದರು.
ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಸಮ್ಮುಖದಲ್ಲಿ ಸಮಿತಿ ಅಧ್ಯರಾಗಿ ಸಂಗಮೇಶ ದೇಸಾಯಿ ಅಧಿಕಾರ ಸ್ವೀಕರಿಸಿದರು.
ಗ್ಯಾರಂಟಿ ಸಮಿತಿ ಜಿಲ್ಲಾಧ್ಯ ಇಲಿಯಾಸ ಭೋರಾಮಣಿ ಮತ್ತು ತಾಲೂಕು ಅಧ್ಯ ಸಂಗಮೇಶ ದೇಸಾಯಿ ಅವರನ್ನು ಶಾಸಕ ನಾಡಗೌಡ ಸನ್ಮಾನಿಸಿದರು.
ಕೆಪಿಸಿಸಿ ಸದಸ್ಯ ಬಿ.ಎಸ್.ಪಾಟೀಲ(ಯಾಳಗಿ), ಅಸ್ಕಿ ಫೌಂಡೇಷನ್ ಅಧ್ಯ ಸಿ.ಬಿ.ಅಸ್ಕಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯ ಸಿದ್ದನಗೌಡ ಪಾಟೀಲ(ನಾವದಗಿ), ಕಾರ್ಯದರ್ಶಿ ವಿಜಯಸಿಂಗ್ ಹಜೇರಿ, ಬ್ಲಾಕ್ ಕಾಂಗ್ರೆಸ್ ಅಧ್ಯ ಮೈಹಿಬೂಬ ಚೋರಗಸ್ತಿ, ಪ್ರಭುಗೌಡ ಮದರಕಲ್ಲ, ಪರಶುರಾಮ ತಂಗಡಗಿ, ಅಕ್ಕಮಹಾದೇವಿ ಕಟ್ಟಿಮನಿ, ಸಂಗನಗೌಡ ಪಾಟೀಲ, ನೀಲಮ್ಮ ಪಾಟೀಲ, ಯಾಜ ಉತ್ನಾಳ, ಸಂಗನಗೌಡ ಅಸ್ಕಿ, ಕಾಸಿಂ ಪಟೇಲ್, ಶೌಕತ್ ಲಾಹೋರಿ, ಗೋಪಾಲ ಕಟ್ಟಿಮನಿ, ಮೋದಿನಸಾ ನಗಾರ್ಚಿ, ಆಸ್ೀ ಕೆಂಭಾವಿ, ಸದ್ದಾಂ ಕುಂಟೋಜಿ, ಶಿವರಾಜ ನಾಗೂರ, ತಾಪಂ ಇಒ ನಿಂಗಪ್ಪ ಮಸಳಿ ಇದ್ದರು.