ಗಂಗಾವತಿಯ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಕಚೇರಿಯಲ್ಲಿ ಪತ್ರಿಕಾ ದಿನಾಚರಣೆ.  
ಜಿಲ್ಲೆ

ಗ್ಯಾರಂಟಿ ಯೋಜನೆಯಲ್ಲಿ ಶೇ.97 ಸಾಧನೆ

ಗಂಗಾವತಿ: ರಾಜ್ಯ ಸರ್ಕಾರ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳು ಜನರಿಗೆ ಅನುಕೂಲವಾಗಿವೆ. ಯೋಜನೆಯನ್ನು ಸದ್ಬಳಕೆಯಲ್ಲಿ ಕೊಪ್ಪಳ ಜಿಲ್ಲೆ ಐದನೇ ಸ್ಥಾನದಲ್ಲಿದೆ ಎಂದು ಗ್ಯಾರಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ ಹೇಳಿದರು.

ನಗರದ ತಾಪಂ ಕಚೇರಿಯಲ್ಲಿ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಕಚೇರಿ ಉದ್ಘಾಟಿಸಿ ಸೋಮವಾರ ಮಾತನಾಡಿದರು. ರಾಜ್ಯ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಅರ್ಹರಿಗೆ ತಲುಪಿಸಿದೆ. ಶೇ.97 ಗುರಿ ಸಾಧಿಸಲಾಗಿದೆ. ಇನ್ನೂ ಕೆಲ ಕುಟುಂಬಗಳಿಗೆ ದೊರೆಕಿಸುವ ನಿಟ್ಟಿನಲ್ಲಿ ತಾಲೂಕು ಸಮಿತಿ ಶ್ರಮಿಸಲಿದೆ ಎಂದರು.

ಸಮಿತಿ ತಾಲೂಕಾಧ್ಯಕ್ಷ ಡಾ.ಕೆ.ವೆಂಕಟೇಶಬಾಬು ಮಾತನಾಡಿ, ಸರ್ಕಾರ ಯೋಜನೆಗಳನ್ನು ಮನೆಬಾಗಿಲಿಗೆ ತಲುಪಿಸಲಾಗುತ್ತಿದ್ದು, ಪ್ರತಿಯೊಂದು ಕುಟುಂಬಕ್ಕೂ ತಲುಪಿಸಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಪತ್ರಿಕಾದಿನ ಆಚರಿಸಲಾಯಿತು. ಪತ್ರಕರ್ತರಾದ ಬಿ.ದೇವರಾಜ್, ವಸಂತಕುಮಾರ, ಪಿ.ದಶರಥ ಮತ್ತು ಮಲ್ಲಿಕಾರ್ಜುನ ಗೋಟೂ ಅವರನ್ನು ಸನ್ಮಾನಿಸಲಾಯಿತು. ಸಮಿತಿ ಜಿಲ್ಲಾ ಉಪಾಧ್ಯಕ್ಷ ಎಸ್.ಬಿ.ಖಾದ್ರಿ, ತಾಲೂಕು ಸಮಿತಿ ಸದಸ್ಯರಾದ ಸನ್ನಿಕ್ ಪಾಷಾ, ಮುಸ್ತಾಕ್, ರಾಮುಕಿರಿಕಿರಿ, ಮಂಜುನಾಥ, ವೀರೇಶ, ಓಂಕಾರೆಪ್ಪ, ಪ್ರಜ್ವಲ್, ದಾವಲ್, ಮುತ್ತುರಾಜ್ ಇತರರಿದ್ದರು.