ಮುದಗಲ್: ಶಿಗ್ಗಾಂವಿ, ಸಂಡೂರು, ಚನ್ನಪಟ್ಟಣದ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ವಿಜಯಸಾಧಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಿಹಿ ಹಂಚಿ, ಪಟಾಕಿ ಸಿಡಿಸಿ, ಸಂಭ್ರಮಿಸಿದರು.
ಮುದಗಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಶಂಕರಗೌಡ ಉಪ್ಪಾರನಂದಿಹಾಳ ಮಾತನಾಡಿ, ರಾಜ್ಯದಲ್ಲಿ ಅಹಿಂದ ವರ್ಗವನ್ನು ಹಿಯಾಳಿಸಿರುವುದು, ಸಿಎಂ ಸಿದ್ರಾಮಯ್ಯ ಅವರ ಸುಳ್ಳಿನ ಮುಡಾ ಹಗರಣವನ್ನು ಹಬ್ಬಿಸಿದರೂ ಫಲ ಸಿಗದೇ ಬಿಜೆಪಿಗರು ಸೋತು ಸುಣ್ಣಾಗಿದ್ದಾರೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳೆ ಗೆಲುವಿಗೆ ಸಹಕಾರಿಯಾಗಿವೆ ಎಂದರು.
ಪ್ರಮುಖರಾದ ಖಾಲೀದ್, ಬಂದೇನವಾಜ ಬಡಿಗೇರ, ಸತೀಶ ಭೋವಿ, ನಂದಪ್ಪ ಕತ್ತಿ, ಸೈಯದ್ ನ್ಯಾಮತ್ ಖಾದ್ರಿ, ಖದೀರ್, ಮೌನೇಶ ಛಲವಾದಿ ಇತರರಿದ್ದರು.