ಜಿಲ್ಲೆ

ಗ್ಯಾರಂಟಿ ಯೋಜನೆಗಳಿಂದ ಅನುದಾನದ ಕೊರತೆ

ಎಂ.ಎಸ್​.ಹಿರೇಮಠ ಬೆಳಗಾವಿ

ಮೂಡಲಗಿ: ಗ್ಯಾರಂಟಿ ಯೋಜನೆಗಳಿಂದ ಅಭಿವದ್ಧಿ ಕಾರ್ಯಗಳಿಗೆ ಅನುದಾನದ ಕೊರತೆ ಉಂಟಾಗುತ್ತಿದ್ದು, ಅರಭಾವಿ ಪಟ್ಟಣದ ಅಭಿವದ್ಧಿಗಾಗಿ ನಗರೋತ್ಥಾನ ಯೋಜನೆಯಡಿ ಅನುದಾನ ತರಲು ಪ್ರಯತ್ನ ಮಾಡುವುದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ ನೀಡಿದರು.

ಪಟ್ಟಣದ ಆಂಜನೇಯ ದೇವಸ್ಥಾನದ ಹತ್ತಿರ ಮುಖ್ಯಮಂತ್ರಿ ಅಮತ ನಗರೋತ್ಥಾನ ಹಂತ&4ರ ಅಡಿ ಪ.ಜಾ / ಪ.ಪಂ ಮತ್ತು ಇತರೆ ಬಡ ಜನಾಂಗದ ಫಲಾನುಭವಿಗಳಿಗೆ 199 ಉಚಿತ ಹೊಲಿಗೆ ಯಂತ್ರ ವಿತರಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ತನ್ನ ಪಂಚ ಭಾಗ್ಯಗಳಿಗೆ ಅನುದಾನ ನೀಡುತ್ತಿರುವುದರಿಂದ ನಮ್ಮ ೇತ್ರದ ಹೊಸ ಅಭಿವದ್ಧಿ ಕಾರ್ಯಗಳಿಗೆ ಯಾವ ಅನುದಾನ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅರಭಾವಿ ಪಟ್ಟಣದ ಅಭಿವದ್ಧಿಗಾಗಿ ಸರ್ಕಾರದಿಂದ ಅನುದಾನದ ನಿರೀೆ ಮಾಡಲಾಗಿದೆ. ರಸ್ತೆ ಸುಧಾರಣೆ, ಒಳಚರಂಡಿ ವ್ಯವಸ್ಥೆ, ಕುಡಿಯುವ ನೀರು ಸೇರಿ ಹಲವು ಬೇಡಿಕೆಗಳನ್ನೂ ಸಾರ್ವಜನಿಕರು ಇಟ್ಟಿದ್ದಾರೆ. ಆದರೆ, ಇವುಗಳನ್ನು ಈಡೇರಿಸಲು ಸರ್ಕಾರದ ಬಳಿ ಹಣವಿಲ್ಲ. ಆದರೂ ಈ ನಿಟ್ಟಿನಲ್ಲಿ ಪಟ್ಟಣ ಪಂಚಾಯಿತಿಗೆ ನಗರೋತ್ಥಾನ ಯೋಜನೆಯಡಿ 5 ಕೋಟಿ ರೂಪಾಯಿ ಅನುದಾನ ಮಂಜೂರಾತಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.

ಪೌರ ಕಾರ್ಮಿಕರಾದ ಶಾನೂರು ಬಾಳಪ್ಪ ಹರಿಜನ, ಮಹಾದೇವ ಭೀಮಪ್ಪ ಮಾದರ ಮತ್ತು ನಿಂಗಪ್ಪ ಭೀಮಪ್ಪ ಕಡ್ಡಿ ತಲಾ ಅವರಿಗೆ 7.50 ಲ ರೂ. ವೆಚ್ಚದಲ್ಲಿ ಮನೆಗಳ ಕಟ್ಟಡ ನಿರ್ಮಾಣದ ಆದೇಶ ಪತ್ರಗಳನ್ನು ವಿತರಿಸಿದರು.

ವೇ. ಮೂ. ಶಿವಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ಪಪಂ ಅಧ್ಯೆ ರೇಣುಕಾ ಮಾದರ, ಉಪಾಧ್ಯೆ ರಾಜಶ್ರೀ ಗಂಗಣ್ಣವರ, ಮುಖಂಡರಾದ ಶಂಕರ ಬಿಲಕುಂದಿ, ಮುತ್ತಪ್ಪ ಜಲ್ಲಿ, ಮಹಾಂತೇಶ ನೇಮಗೌಡರ, ಭೀಮಶಿ ಹಳ್ಳೂರ, ನಿಂಗಪ್ಪ ಇಳಿಗೇರಿ, ರಮೇಶ ಮಾದರ, ಕಷ್ಣ ಬಂಡಿವಡ್ಡರ, ಯಲ್ಲಪ್ಪ ಸತ್ತಿಗೇರಿ, ಸಾತಪ್ಪ ಜೆನ್​, ಕೆಂಚಪ್ಪ ಮಂಟೂರ, ಅಡಿವೆಪ್ಪ ಬಿಲಕುಂದಿ, ರಮೇಶ ಸಂಪಗಾವ, ಸಿದ್ದು ಕಂಕಣವಾಡಿ, ಸತ್ತೆಪ್ಪ ಬಡಾಯಿ, ರಾಜು ಜಕ್ಕನಟ್ಟಿ, ಇಕ್ಬಾಲ್​ ಸರ್ಕವಸ್​, ಅಶೋಕ ಬಂಡಿವಡ್ಡರ, ಕುಮಾರ ಪೂಜೇರಿ, ಮುಖ್ಯಾಧಿಕಾರಿ ವಿನಾಯಕ ಬಬಲೇಶ್ವರ ಇತರರು ಇದ್ದರು.