ಹಗರಿಬೊಮ್ಮನಹಳ್ಳಿ: ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಜಾರಿಯಾದಾಗಿನಿಂದ ಕ್ಷೇತ್ರಗಳ ಅಭಿವೃದ್ಧಿ ಸಂಪೂರ್ಣ ಕುಂಟಿತಗೊಂಡಿವೆ. ಯೋಜನೆಗಳು ಮತಗಳಾಗಿ ಪರಿವರ್ತನೆ ಭ್ರಮೆಯಲ್ಲಿದ್ದು, ಜನರ ಕಲ್ಯಾಣ ಯೋಜನೆಗಳು ನೆನೆಗುದಿಗೆ ಬಿದ್ದಿವೆ ಎಂದು ರಾಜ್ಯ ಸರ್ಕಾರವನ್ನು ಹೂವಿನ ಹಡಗಲಿ ಶಾಸಕ ಎಲ್.ಕೃಷ್ಣನಾಯ್ಕ ಟೀಕಿಸಿದರು.
ಇದನ್ನೂ ಓದಿ: ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ಪ್ರಯತ್ನ : ತಾಲೂಕು ಸಮಿತಿ ಅಧ್ಯಕ್ಷ ಆಲ್ವಿನ್ ಕ್ಲೆಮೆಂಟ್ ಕುಟಿನ್ಹ ಹೇಳಿಕೆ
ತಾಲೂಕಿನ ಮೋರಗೆರೆಯಲ್ಲಿ ಕೆಪಿಎಸ್ ಶಾಲೆಗಳ ಸೌಲಭ್ಯ ಯೋಜನೆಯಡಿ ಕೈಗೊಂಡ ಸಮಾಹಿಪ್ರಾ ಶಾಲೆ, ಪ್ರೌಢ ಶಾಲೆಗಳ ತಲಾ 2ಕೊಠಡಿಗಳು, ಲೈಬ್ರೆರಿ, ಒಂದು ಕೊಠಡಿ ಮೇಲ್ಛಾವಣೆ ಒಟ್ಟು 1.8ಕೋಟಿ ರೂ.ಗಳ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.
ರಾಜ್ಯ ಹೆದ್ದಾರಿ 280ಕಿ.ಮೀ, ಜಿ.ಮು.ರಸ್ತೆಗಳು 300ಕಿ.ಮೀಗಳಿವೆ ಈಗಾಗಲೇ ಶೇ.50ಕ್ಕೂ ಹೆಚ್ಚು ಹದಗೆಟ್ಟಿವೆ. ರಿಮೇರಿಗಾಗಿ 1.ಕಿ.ಮೀ.ಗೆ 1ಕೋಟಿ ರೂ.ಗಳು ಅಂದಾಜಾದರೂ, ಅರ್ಧದಷ್ಟು ಒಟ್ಟು 300ಕಿ.ಮೀ.ಕೋಟಿ ರೂ.ಗಳು ಬೇಕು. ರಾಜ್ಯದ ಬಜೆಟ್ 4ಲಕ್ಷದ 9ಸಾವಿರ ಕೋಟಿ ರೂ.ಗಳು ಮಾತ್ರ. ಕನಿಷ್ಟ ಶೇ.10ರಷ್ಟು ಅಭಿವೃದ್ಧಿಗಾಗಿಯಾದರೂ, 40ಸಾವಿರ ಕೋಟಿ ರೂ.ಗಳು ಆಗುತ್ತೆ. ಅದರಲ್ಲಿ 8ಸಾವಿರ ಕೋಟಿ ರೂ.ಗಳಷ್ಟು ಕ್ಷೇತ್ರದ ಅಭಿವೃದ್ಧಿಗೆ 2.5ವರ್ಷಗಳು ಕಳೆದ ಮೇಲೆ ಕೊಟ್ಟರೆ ಯಾವ ಅಭಿವೃದ್ಧಿ ಮಾಡಬೇಕು,
ಯಾವ ರಸ್ತೆಗಳ ಗುಂಡಿಗಳನ್ನು ಮುಚ್ಚಬೇಕು. ಗ್ಯಾರಂಟಿ ಯೋಜನೆಗಳ ಭ್ರಮೆಯಲ್ಲಿರುವ ಸರ್ಕಾರ ರಾಜ್ಯದಲ್ಲಿ ಶಾಲಾ, ಕಾಲೇಜ್‌ಗಳ, ಉದ್ಯೋಗ ಸೃಷ್ಠಿ ಇಲ್ಲ, ರಸ್ತೆಗಳೆಲ್ಲ ಗುಂಡಿಗಳಿಂದ ನಿರ್ಮಾಣವಾಗಿವೆ ಪರಿಸ್ಥಿತಿ ಗಂಭೀರವಾಗಿದೆ. ಧರ್ಮಸ್ಥಳ ಬುರುಡೆಯ ಪುರಾಣ ಕುತುಂತ್ರವಾಗಿದೆ. ಹಿಂದು ದೇಗುಲಗಳನ್ನು ಗುರಿಯಾಗಿಸಿಕೊಂಡು ಇಂತಹ ಕೃತ್ಯಕ್ಕೆ ಮತ್ತು ಸುಳ್ಳು ಸುದ್ದಿ ಹಬ್ಬಿಸಿ ಜನರ ಮನಸ್ಸು ಬೇರೆಡೆ ಸೆಳೆಯುವ ಕಲಸ ಮಾಡುತ್ತಾರೆ.
ಅಂತಹವರ ಜತೆಗೆ ಹಿಂದುಗಳೇ ಕೈಜೋಡಿಸುತ್ತಿರವುದು ದುರಂತದ ಸಂಗತಿ. ಮುಂದೆ ಸತ್ಯ ಹೊರಬರಲಿದ್ದು ಯಾರೇ ತಪ್ಪು ಮಾಡಿದರೂ ಸರಿಯಾದ ಶಿಕ್ಷೆಯಾಗಬೇಕು ಎಂದರು.
ಎಸ್‌ಡಿಎಂಸಿ ಉಪಾಧ್ಯಕ್ಷ ಪಿ.ಅಂಜಿನಪ್ಪ, ಗ್ರಾಪಂ ಸದಸ್ಯರಾದ ಶ್ರೀಧರ, ಅನುಮೇಶ, ಕರಿಬಸಪ್ಪ, ಮಾಜಿ ಅಧ್ಯಕ್ಷ ಚಿಲುಗೋಡು ಜಯಪ್ಪ, ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಎ.ದೊಡ್ಡಬಸವನಗೌಡ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಎ.ಶಿವಾನಂದ, ಹುಲಿಗೆಮ್ಮ, ಬಾವಿ ಕವಿತಾ ಇತರರಿದ್ದರು.