ರಾಯಚೂರಿನ ಮಕ್ತಲ್‌ಪೇಟೆಯಲ್ಲಿನ ಶಾಂತಮ್ಮ ಎಂಬುವವರ ಮನೆ ಗೋಡೆ ಸೋಮವಾರ ಕುಸಿದಿರುವುದು.
ಜಿಲ್ಲೆ
ಜಿಟಿಜಿಟಿ ಮಳೆಗೆ ಕುಸಿದ ಮನೆಯ ಗೋಡೆ
ರಾಯಚೂರು: ಜಿಟಿಜಿಟಿ ಮಳೆಯಿಂದಾಗಿ ನಗರದ ಮಕ್ತಲ್‌ಪೇಟೆಯಲ್ಲಿನ ಮನೆಯೊಂದರ ಗೋಡೆ ಸೋಮವಾರ ತಡ ರಾತ್ರಿ ಕುಸಿದಿದೆ. ಮನೆಯಲ್ಲಿ ಮಲಗಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶಾಂತಮ್ಮ ಎಂಬುವವರ ಹಳೆಯ ಮನೆ ಗೋಡೆ ನಿರಂತರ ಮಳೆಯಿಂದ ಶಿಥಿಲಗೊಂಡಿತ್ತು. ಮನೆಯವರು ಮಲಗಿದ್ದ ಮಂಚದ ಪಕ್ಕದಲ್ಲೇ ಗೋಡೆ ಕುಸಿದಿದೆ.