ಜಿಲ್ಲೆ

ಕಿಕ್ಕೇರಿಯಲ್ಲಿ ಜಿಟಿಜಿಟಿ ಮಳೆ

ಕಿಕ್ಕೇರಿ: ಹೋಬಳಿಯಾದ್ಯಂತ ಗುರುವಾರ ಸುರಿದ ಜಿಟಿಜಿಟಿ ಮಳೆಯಿಂದ ಜನರು ಕಿರಿಕಿರಿ ಅನುಭವಿಸುವಂತಾಯಿತು.

ಬೆಳಗ್ಗಿನಿಂದ ಮೋಡ ಕವಿದ ವಾತಾವರಣ ಇದ್ದು, ಜನರಲ್ಲಿ ಆಲಸ್ಯ ಮೂಡಿಸಿತು. ಮುಂಜಾನೆಯಿಂದಲೇ ಮಳೆ ಆರಂಭವಾಗಿ ಶಾಲಾ-ಕಾಲೇಜಗಳಿಗೆ ಮಕ್ಕಳು ತೆರಳಲು ಹಿಂದೇಟು ಹಾಕಿದರು. ಚಳಿ, ಮಳೆಗೆ ರಸ್ತೆಯಲ್ಲಿ ಸಂಚರಿಸಲಾರದೆ ಜನರು ಮನೆಯಲ್ಲಿ ಕುಳಿತರು. ರೈತರು ಹೊಲಗದ್ದೆಗೆ ತೆರಳು ತೊಂದರೆ ಉಂಟಾಯಿತು. ವಾಹನ ಸಂಚಾರ ವಿರಳವಾಗಿತ್ತು. ಸಂಜೆ ಶಾಲೆ ಮಕ್ಕಳು ಮನೆಗೆ ತೆರಳಲು ಪರದಾಡಿದರು.