ಜಿಲ್ಲೆ

ಡಿ.27 ರಿಂದ ಮೂರು ದಿನಗಳ ಕಾಲ ಗೃಹಲಕ್ಷ್ಮಿಕ್ಯಾಂಪ್​

Gadag - Shivanand Hiremath

ಶಿವಾನಂದ ಹಿರೇಮಠ, ಗದಗ
ಗೃಹಲಕ್ಷ್ಮಿ ಯೋಜನೆಯಲ್ಲಿ ಸೃಷ್ಟಿಯಾಗಿರುವ ಗೊಂದಲ ನಿವಾರಣೆಗೆ ಮತ್ತು ಗ್ರಾಮೀಣ ಭಾಗದಲ್ಲಿ ಸಮರ್ಪಕ ಯೋಜನೆ ಜಾರಿಗೊಳಿಸಲು ರಾಜ್ಯ ಸರ್ಕಾರ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಡಿ.27 ರಿಂದ ಮೂರು ದಿನಗಳ ವರೆಗೆ ಗೃಹಲಕ್ಷ್ಮಿ ಕ್ಯಾಂಪ್​ ಜಾರಿಗೊಳಿಸಲು ಉದ್ದೇಶಿಸಿದೆ. ನಿಷ್ಕ್ರಿಯ ಬ್ಯಾಂಕ್​ ಖಾತೆಗಳಿಗೆ ಆಧಾರ ಜೋಡಣೆ ಮತ್ತು ಆಧಾರ ಜೋಡಣೆ ಮಾಡದೇ ಇರುವ ಅರ್ಹರು ಗೃಹಲಕ್ಷ್ಮಿ ಯೋಜನೆಯಿಂದ ವಂಚಿತರಾಗಿದ್ದನ್ನು ಸರಿಪಡಿಸಿ ಯೋಜನೆಗೆ ಒಳಪಡಿಸಲು ರಾಜ್ಯ ಸರ್ಕಾರ ಈ ತೀರ್ಮಾನ ಕೈಗೊಂಡಿದೆ. ಇದರ ಭಾಗವಾಗಿ ಜಿಲ್ಲೆಯ 122 ಗ್ರಾಪಂಗಳಲ್ಲಿ ಡಿ.27 ರಿಂದ ಗೃಹಲಕ್ಷ್ಮಿ ಕ್ಯಾಂಪ್​ ನಡೆಲಿದೆ.
ಈ ವರೆಗೆ ಜಿಲ್ಲೆಯಲ್ಲಿ 2.18 ಲಕ್ಷ ಅರ್ಹರ ಮಹಿಳೆಯರು ಈ ಯೋಜನೆ ಲಾನುಭವಿಗಳಾಗಿದ್ದಾರೆ. ಪ್ರತಿ ಲಾನುಭಗಿಳಿಗೆ 2000 ರೂ. ನಂತೆ ಮೊದಲ ಕಂತಿನಲ್ಲಿ 42 ಕೋಟಿ, ಎರಡನೇ ಕಂತಿನಲ್ಲಿ 46 ಕೋಟಿ ಹಣ ಸಂದಾಯವಾಗಿದೆ. ಮೂರನೇ ಕಂತಿನ ಹಣವನ್ನು ರಾಜ್ಯ ಸರ್ಕಾರವೇ ನೇರವಾಗಿ ಡಿಬಿಟಿ ಮೂಲಕ ಲಾನುಭವಿಗಳಿಗೆ ಹಣ ಸಂದಾಯ ಮಾಡುತ್ತಿದೆ. ಯೋಜನೆಗೆ ಒಳಪಡಲು ಅಜಿರ್ ಸಲ್ಲಿಸಿದವರಲ್ಲಿ ಜಿಲ್ಲೆಯ 850ಕ್ಕೂ ಅಧಿಕ ಮಹಿಳೆಯರ ಬ್ಯಾಂಕ್​ ಖಾತೆಗೆ ಸಂಬಂಧಿಸಿದಂತೆ ಸಮಸ್ಯೆ ಎದುರಾಗಿದೆ. ಕೆವೈಸಿ ಮಾಡಿಸದಿರುವುದು, ಆಧಾರ ಜೋಡಣೆ ಆಗದಿರುವುದು, ನಿಷ್ಕ್ರಿಯ ಖಾತೆಗಳಿಗೆ ಆಧಾರ ಜೋಡಣೆ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಸಮಸ್ಯೆ ಬಗೆ ಹರಿಸಲು ಆಯಾ ಗ್ರಾಪಂ ನಲ್ಲಿ ಗೃಹಲಕ್ಷ್ಮಿ ಕ್ಯಾಂಪ್​ ಜರುಗಲಿದೆ.

ಪಿಡಿಓ ಜವಾಬ್ದಾರಿ:

  • ಪಿಡಿಓ ನೇತೃತ್ವದಲ್ಲಿ ಗೃಹಲಕ್ಷ್ಮಿ ಕ್ಯಾಂಪ್​ ಆಯೋಜನೆ.
  • ತಾಂತ್ರಿಕ ಮತ್ತು ಬ್ಯಾಂಕ್​ ಗೆ ಸಂಬಂಧಿಸಿದ ಸಮಸ್ಯೆ ಬಗೆಹರಿಸುವುದು.
  • ಬಾಪೂಜಿ ಸೇವಾ ಕೇಂದ್ರದ ಗಣಕ ಯಂತ್ರ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತರು ಕ್ಯಾಂಪ್​ ನಲ್ಲಿ ಭಾಗವಹಿಸಬೇಕು.
  • ಇಂಡಿಯಾ ಪೋಸ್ಟ್​ ಸಿಬ್ಬಂದಿ, ಬ್ಯಾಂಕ್​ ಸಿಬ್ಬಂದಿ ಭಾಗವಹಿಸುವುದು ಕಡ್ಡಾಯ.
  • ಹೊಸ ಬ್ಯಾಂಕ್​ ಖಾತೆ ತೆರೆಯುವುದು.
  • ಖಾತೆಗೆ ಆಧಾರ ಜೋಡಣೆ, ಕೆವೈಸಿ ಅಪ್ಟೇಡ್​

ರಾಜ್ಯದಲ್ಲಿ 1.17 ಕೋಟಿ ಮಹಿಳೆಯರು ಈ ಯೋಜನೆಗೆ ನೋಂದಣಿ ಮಾಡಿಸಿದ್ದಾರೆ. ಇದರಲ್ಲಿ 2.50 ಲಕ್ಷ ಮಹಿಳೆಯರು ಬ್ಯಾಂಕ್​ ಖಾತೆಗಳಿಗೆ ಆಧಾರ ಜೋಡಣೆ ಮಾಡಿಲ್ಲ. 70 ಸಾವಿರ ನಿಷ್ಕ್ರಿಯ ಖಾತೆಗಳಿಗೆ ಆಧಾರ ಜೋಡಣೆ ಆಗಿದೆ. ಲಾನುಭವಿಗಳಿಗೆ ನೇರ ನಗದು ವರ್ಗಾವಣೆಗೆ ಬ್ಯಾಂಕ್​ ಖಾತೆಗಳಿಗೆ ಆಧಾರ ಜೋಡಣೆ ಕಡ್ಡಾಯ ಆಗಿದ್ದು, ಸಮಸ್ಯೆಗಳನ್ನು ಶೂನ್ಯ ಪ್ರಮಾಣಕ್ಕೆ ಇಳಿಸಲು ರಾಜ್ಯ ಸರ್ಕಾರ ಈ ಪ್ರಕ್ರಿಯೆ ಹಮ್ಮಿಕೊಂಡಿದೆ.

ಕೋಟ್​:
ಗೃಹಲಕ್ಷ್ಮಿ ಯೋಜನೆ ಮಹಿಳೆಯರ ಆಥಿರ್ಕ ಬಲವರ್ಧನೆಗೆ ಸಹಕಾರಿ ಆಗಿದೆ. ಯೋಜನೆ ಜಾರಿ ನಂತರ ಜಿಲ್ಲೆಯಲ್ಲಿ ಮತ್ತು ರಾಜ್ಯದಲ್ಲಿ ಕುಟುಂಬಗಳಲ್ಲಿ ಆಥಿರ್ಕ ಸುಧಾರಣೆ ಕಂಡಿದೆ. ಯೋಜನೆ ಜಾರಿ ನಂತರ ಸೃಷ್ಟಿ ಆಗಿದ್ದ ಸಮಸ್ಯೆಗಳನ್ನು ಶೂನ್ಯಕ್ಕೆ ಇಳಿಸಲು ಸರ್ಕಾರ ಗೃಹಲಕ್ಷಿ$್ಮ ಕ್ಯಾಂಪ್​ ಆಯೋಜಿಸಿದೆ. ಅರ್ಹರೆಲ್ಲರೂ ಯೋಜನೆ ಲಾಭ ಪಡೆಯಬೇಕು ಎಂಬುದು ರಾಜ್ಯ ಸರ್ಕಾರದ ಉದ್ದೇಶ.
- ಎಚ್​.ಕೆ. ಪಾಟೀಲ, ಸಚಿವ

ಕೋಟ್​:
ಜಿಲ್ಲೆಯಲ್ಲಿ ಮೊದಲ ಮತ್ತು ಎರಡನೇ ಕಂತಿನ ಪಾವತಿಯನ್ನು ಜಿಲ್ಲೆಯಿಂದಲೇ ನಿರ್ವಹಿಸಿದ್ದೇವೆ. ಈಗ ನೇರವಾಗಿ ಸರ್ಕಾರದಿಂದಲೇ ಡಿಬಿಟಿ ಮೂಲಕ ಲಾನುಭವಿಗಳಿಗೆ ಹಣ ಪಾವತಿ ಆಗುತ್ತಿದೆ. ಗದಗ ಜಿಲ್ಲೆಯಲ್ಲಿ ಶೇ. 97 ರಷ್ಟು ಪ್ರಗತಿ ಸಾಧಿಸಿದ್ದೇವೆ. ಶೇ. 100 ರಷ್ಟು ಪ್ರಗತಿ ಸಾಧಿಸಲು ಇಲಾಖೆ ಶ್ರಮವಹಿಸುತ್ತಿದೆ.
- ಪರಶುರಾಮ ಶೆಟ್ಟಪ್ಪನ್ನವರ, ಡಿಡಿ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ