ಜಿಲ್ಲೆ

ಗ್ಯಾರಂಟಿ ನೋಂದಣಿ ಪರಿಶೀಲಿಸಿದ ವಿಜಯಸಿಂಗ್​

ರಮೇಶ ಮೇಳಕುಂದಾ

ಬಸವಕಲ್ಯಾಣ: ಮಾಜಿ ಎಂಎಲ್ಸಿ ವಿಜಯ್‌ಸಿಂಗ್ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ಮಾಡಿ ಸಾರ್ವಜನಿಕರ ಕುಂದು ಕೊರತೆ ಆಲಿಸಿದರು.
ನಂತರ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಮಹತ್ವದ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷಿ ಯೋಜನೆಯ ನೋಂದಣಿ ಪ್ರಕ್ರಿಯೆ ಚುರುಕಿನಿಂದ ಮುಂದುವರಿಯುತ್ತಿದ್ದು, ಮಾಸಿಕ 2 ಸಾವಿರ ರೂ. ಸಹಾಯಧನ ನೀಡುವ ಯೋಜನೆಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಸುತ್ತಿದ್ದಾರೆ ಎಂದರು.
ಹಾರಕೂಡ, ಮುಡುಬಿ, ಮಿರಖಲ್ ಗ್ರಾಮಗಳ ಗ್ರಾಮ ಒನ್ ಹಾಗೂ ಡಿಜಿಟಲ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ನೋಂದಣಿ ಪ್ರಕ್ರಿಯೆ ಪರಿಶೀಲಿಸಿದರು.
ಹಾರಕೂಡ ಹಾಗೂ ಮುಡುಬಿ ಗ್ರಾಮಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ವ್ಯವಸ್ಥೆ ಕುರಿತು ಮಾಹಿತಿ ಪಡೆದರು. ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ ಗಮನಿಸಿ ಆರೋಗ್ಯ ಸಚಿವರ ಗಮನಕ್ಕೆ ತಂದು ಶೀಘ್ರ ಹುದ್ದೆ ಭರ್ತಿ ಮಾಡಲು ಮನವಿ ಮಾಡುವುದಾಗಿ ತಿಳಿಸಿದರು.
ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ನೀಲಕಂಠ ರಾಠೋಡ, ಜಿಪಂ ಮಾಜಿ ಸದಸ್ಯ ಆನಂದ ಪಾಟೀಲ್, ತಾಪಂ ಮಾಜಿ ಸದಸ್ಯ ಓಂಪ್ರಕಾಶ ಪಾಟೀಲ್, ಪ್ರಮುಖರಾದ ಬಸವರಾಜ ಬಿರಾದಾರ, ಸಿದ್ರಾಮಪ್ಪ ಗುದಗೆ, ರಾಮಲಿಂಗ ರೆಡ್ಡಿ, ಶರಣು ಅಲಗೂಡ, ಮಂಜು ಪೀರ್ಜೆ, ಜೀತೆಂದ್ರ ಖೇರ್ಡಾ, ಅಯ್ಯಪ್ಪ ಸಜ್ಜನಶೆಟ್ಟಿ, ಸಿದ್ರಾಮ ಹೆಗ್ಡೆ, ತುಕಾರಾಮ ಬೌನಿ, ಸುಮಿತ್ ನಿಪ್ಪಾಣಿ, ಮಹೆಬೂಬ, ಗುಂಡಪ್ಪ, ಶೇಖರ ಹತ್ಯಾಳ ಇತರರಿದ್ದರು.