ಜಿಲ್ಲೆ

ಗುಂಪು ಚರ್ಚಾ ಸ್ಪರ್ಧೆ 27ರಂದು

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಧಾರವಾಡ ಜಿಲ್ಲಾ ಅಭಿಯಾನ, ಪರಿಸರ ಸಮಿತಿ ಹಾಗೂ ಹಾಲಭಾವಿ ಸರ್ವದಾನ ಟ್ರಸ್ಟ್​ ಸಹಯೋಗದಲ್ಲಿ ಸಮಿತಿ ವತಿಯಿಂದ ಸ್ವಚ್ಛತೆ ಹಾಗೂ ಕಸ ನಿರ್ವಹಣೆ ಕುರಿತು ಜಾಗೃತಿ ಮೂಡಿಸಲು ಮಹಿಳೆಯರಿಗೆ ಕಸ (ತ್ಯಾಜ್ಯ) ಮುಕ್ತ ಪರಿಸರ ವಿಷಯ ಕುರಿತು ಗುಂಪು ಚರ್ಚಾ ಸ್ಪರ್ಧೆಯನ್ನು ಜು. 27ರಂದು ಮಧ್ಯಾಹ್ನ 2.30ಕ್ಕೆ ಸಾಧನಕೇರಿ ಬೇಂದ್ರೆ ಭವನದಲ್ಲಿ ಆಯೋಗಿಸಲಾಗಿದೆ.
4 ಸದಸ್ಯರಿರುವ ಒಂದು ಗುಂಪಿಗೆ 5 ನಿಮಿಷ ಕಾಲಾವಕಾಶ ನೀಡಲಾಗುವುದು. ಹಸಿರು ಬಣ್ಣದ ಸಮವಸ್ತ್ರ ಧರಿಸಿರಬೇಕು. ಆಸಕ್ತರು ಹೆಸರು ನೋಂದಾಯಿಸಲು ಜು. 20 ಕೊನೇ ದಿನ. ಹೆಚ್ಚಿನ ಮಾಹಿತಿಗೆ ಪರಿಸರ ಸಮಿತಿ ಅಧ್ಯಕ್ಷೆ ಜಯಶ್ರೀ ಗೌಳಿಯವರ ಅವರನ್ನು ಸಂಪಕಿರ್ಸಬಹುದು ಎಂದು ಪ್ರಕಟಣೆ ತಿಳಿಸಿದೆ.