RAICHUR 
ಜಿಲ್ಲೆ

ಗುಂಪು ಘರ್ಷಣೆ, 22 ಜನರ ವಿರುದ್ಧ ಪ್ರಕರಣ, ಐವರ ಬಂಧನ

ರಾಯಚೂರು  ತಾಲೂಕಿನ ದೇವಸುಗೂರು ಗ್ರಾಮದ ಲೇಬರ್ ಕಾಲೋನಿಯಲ್ಲಿ ಇಬ್ಬರು ಯುವಕರು ಪರಸ್ಪರ ಅವಾಚ್ಯ ಶಬ್ದಗಳಿಂದ ಬೈದಾಡಿದ ಕಾರಣಕ್ಕೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು 22 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಐವರ ಜನರ ಬಂಧನವಾಗಿದೆ.

ಗ್ರಾಮದ ಸಂದೀಪ್ ಹಾಗೂ ಶಿವು ನಡುವೆ ಏ.10 ರಂದು ಮಾತಿಗೆ ಮಾತು ಬೆಳೆದು, ಪರಿಸ್ಥಿತಿ ವಿಕೋಪಕ್ಕೆ ಹೋಗಿ ಅಲೆಮಾರಿ ಜನಾಂಗದವರು ಹಾಗೂ ಗ್ರಾಮಸ್ಥರು ಕಟ್ಟಿಗೆ, ದೊಣ್ಣೆ, ಕಲ್ಲುಗಳಿಂದ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಹಲ್ಲೆ ಕುರಿತು ದೂರು ದಾಖಲಾಗುತ್ತಿದ್ದಂತೆ ಮತ್ತೊಮ್ಮೆ ಎರಡು ಗುಂಪಿನ ನಡುವೆ ಘರ್ಷಣೆ ನಡೆದಿದೆ. ಶಕ್ತಿ ನಗರ ಠಾಣೆಯಲ್ಲಿ ದೂರು-ಪ್ರತಿದೂರು ಸಲ್ಲಿಕೆಯಾಗಿದ್ದು,

ಎರಡು ಗುಂಪಿನ 22 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಎರಡೂ ಕಡೆಯ ಐವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.