ಬಾಳೆಹೊನ್ನೂರಿನ ಲಯನ್ಸ್ ಕ್ಲಬ್‌ನಿಂದ ಮೇಗರಮಕ್ಕಿಯಲ್ಲಿ ಗದ್ದೆ ನಾಟಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎಂ.ವಿ.ಶ್ರೀನಿವಾಸ ಗೌಡ, ಎಂ.ನಾರಾಯಣ, ಶರತ್‌ಕುಮಾರ್, ಶಿವರಾಮ್, ಮಂಜುನಾಥ್, ಸುಬ್ರಹ್ಮಣ್ಯ ಇತರರಿದ್ದರು. 
ಜಿಲ್ಲೆ

ಭತ್ತ ಬೇಸಾಯದಿಂದ ಅಂತರ್ಜಲ ವೃದ್ಧಿ

ಬಾಳೆಹೊನ್ನೂರು: ಭತ್ತದ ಬೇಸಾಯದಿಂದ ಅಂತರ್ಜಲ ಹೆಚ್ಚಲಿದೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಎಂ.ವಿ.ಶ್ರೀನಿವಾಸಗೌಡ ಹೇಳಿದರು.

ಪಟ್ಟಣದ ಲಯನ್ಸ್ ಕ್ಲಬ್‌ನಿಂದ ಮೇಗರಮಕ್ಕಿಯಲ್ಲಿ ಬುಧವಾರ ಆಯೋಜಿಸಿದ್ದ ಗದ್ದೆ ನಾಟಿ ಕಾರ್ಯಕ್ರಮದಲ್ಲಿ ಮಾತನಾಡಿ, ಈ ಹಿಂದೆ ಮಲೆನಾಡು ಭಾಗದಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಗದ್ದೆ ನಾಟಿ ಮಾಡುತ್ತಿದ್ದರಿಂದ ಅಂತರ್ಜಲ ಹೆಚ್ಚಳವಾಗುತ್ತಿತ್ತು. ಆಗ ಮಲೆನಾಡಿನಲ್ಲಿ ಮಳೆ ಹಾಗೂ ನೀರಿಗೆ ಯಾವುದೇ ಕೊರತೆ ಇರಲಿಲ್ಲ. ಈಗ ಮಲೆನಾಡಿನ ಭತ್ತದ ಗದ್ದೆಗಳೆಲ್ಲ ವಾಣಿಜ್ಯ ಭೂಮಿಗಳಾಗಿ ಪರಿವರ್ತಿಸಲಾಗಿದೆ. ಇದರಿಂದ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಆದ್ದರಿಂದ ಯುವಜನರಿಗೆ ಭತ್ತದ ನಾಟಿಯ ಅರಿವು ಮೂಡಿಸಲು ಗದ್ದೆಯ ನಾಟಿಯಲ್ಲಿ ಒಂದು ದಿನ ಸದಸ್ಯರು ತೊಡಗಿಸುಕೊಳ್ಳುವಂತೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರು. ಕ್ಲಬ್ ಖಜಾಂಚಿ ಶರತ್‌ಕುಮಾರ್, ಕಾರ್ಯದರ್ಶಿ ಎಂ.ನಾರಾಯಣ, ಎಂ.ಡಿ.ಶಿವರಾಮ್, ಎಂ.ಆರ್.ಮಂಜುನಾಥ್, ಮಂಜುನಾಥ್ ತುಪ್ಪೂರು, ಎನ್.ಸುಬ್ರಹ್ಮಣ್ಯ, ಎಸ್.ಎಸ್.ಜಗದೀಶ್, ಎ.ಸಿ.ಕೃಷ್ಣಮೂರ್ತಿ, ಕೆ.ಜೈಪ್ರಕಾಶ್, ಸುರೇಂದ್ರ, ಚೇತನ್, ಯೋಗೀಶ್‌ಗೌಡ, ಕೆ.ಸಿ.ರವೀಂದ್ರ ಇತರರಿದ್ದರು.