ಜಿಲ್ಲೆ

ಕೃಷಿ ಅಧಿಕಾರಿಯಿಂದಲೇ ಶೇಂಗಾ ಬೀಜ ಸಾಗಣೆ

ಸೋಮನಾಥ ರೆಡ್ಡಿ

ಮುಂಡರಗಿ: ಪಟ್ಟಣದ ರೈತ ಸಂಪರ್ಕ ಕೇಂದ್ರದಿAದ ಶನಿವಾರ ಶೇಂಗಾ ಕಾಯಿ ಚೀಲವನ್ನು ಸಾಗಿಸುತ್ತಿದ್ದ ಸಹಾಯಕ ಕೃಷಿ ಅಧಿಕಾರಿಯ ವಾಹನಕ್ಕೆ ಮುತ್ತಿಗೆ ಹಾಕಿದ ರೈತರು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಸ್ಥಳೀಯ ರೈತ ಸಂಪರ್ಕ ಕೇಂದ್ರದಿAದ ಸಹಾಯಕ ಕೃಷಿ ಅಧಿಕಾರಿ ಬಿ. ನಿಂಗಪ್ಪ ಅವರು ಪ್ರಾಯೋಗಿಕ ಬಿತ್ತನೆಯ ಶೇಂಗಾ ಕಾಯಿಯ ೨೦ ಕೆಜಿ ತೂಕದ ೧ ಚೀಲವನ್ನು ತಮ್ಮ ಕಾರಿನಲ್ಲಿ ಸಾಗಿಸುತ್ತಿದ್ದರು. ಆಗ ಆಗಮಿಸಿದ ಕೆಲ ರೈತರು, ಪ್ರಗತಿಪರ ರೈತರಿಗೆ ವಿತರಿಸಬೇಕಾದ ಶೇಂಗಾ ಕಾಯಿಗಳನ್ನು ಎಲ್ಲಿಗೆ ಸಾಗಿಸುತ್ತಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.

ಹಮ್ಮಿಗಿ ಗ್ರಾಮದಲ್ಲಿರುವ ನಮ್ಮ ಸಂಬAಧಿ ರೈತರಿಗೆ ಶೇಂಗಾ ಕಾಯಿಗಳನ್ನು ಒಯ್ಯುತ್ತಿz್ದೆÃನೆ ಎಂದು ಬಿ. ನಿಂಗಪ್ಪ ಉತ್ತರಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ರೈತ ಮುಖಂಡ ಸುರೇಶ ಹಲವಾಗಲಿ ಮತ್ತಿತರರು ರೈತ ಸಂಪರ್ಕ ಕೇಂದ್ರಕ್ಕೆ ಆಗಮಿಸಿ ಎಲ್ಲ ದಾಖಲೆಗಳನ್ನು ಸಲ್ಲಿಸಿದರೂ ನಮಗೆ ಸಮರ್ಪಕವಾಗಿ ಬೀಜ ನೀಡುವುದಿಲ್ಲ. ಆದರೆ, ಯಾವ ದಾಖಲೆಗಳೂ ಇಲ್ಲದೆ ಬೇಕಾದವರಿಗೆ ಬೀಜಗಳನ್ನು ನೀಡುತ್ತಿದ್ದೀರಿ ಎಂದು ತರಾಟೆಗೆ ತಗೆದುಕೊಂಡರು. ನಂತರ ರೈತರು ಮೊಬೈಲ್ ಮೂಲಕ ಪೊಲೀಸರನ್ನು ಸಂಪರ್ಕಿಸಿ ಘಟನೆ ಕುರಿತು ಮಾಹಿತಿ ನೀಡಿದರು. ಸ್ಥಳಕ್ಕಾಗಮಿಸಿದ ಪೊಲೀಸ್ ಸಿಬ್ಬಂದಿ ಶೇಂಗಾ ಕಾಯಿಯ ಚೀಲ ಹಾಗೂ ಕಾರ್ ವಶಕ್ಕೆ ಪಡೆದರು.

ಶರಣಪ್ಪ ಚನ್ನಳ್ಳಿ, ಯಮನೂರಪ್ಪ ಅಡವಿಹಳ್ಳಿ, ಸಿದ್ದಪ್ಪ ಪೂಜಾರ, ನಾಗಪ್ಪ ಬಸಾಪುರ, ಲಕ್ಷö್ಮಪ್ಪ ವಾಲಿಕಾರ, ಅಡಿವೆಪ್ಪ ಚಲವಾದಿ ಇತರರಿದ್ದರು.