ಜಿಲ್ಲೆ

ಚಿರತೆ ದಾಳಿಯಿಂದ 14 ಕುರಿಗಳು ಬಲಿ

ಪ್ರವೀಣ ಉದುಸಾ ದಲಬಂಜನ್

ಕುಕನೂರು: ತಾಲೂಕಿನ ನೆಲಜೇರಿ ಗ್ರಾಮದಲ್ಲಿ ಚಿರತೆ ದಾಳಿಯಿಂದ ಬುಧವಾರ ರಾತ್ರಿ 14 ಕುರಿಗಳು ಬಲಿಯಾಗಿವೆ.

ಗ್ರಾಮದ ಕುರಿಗಾಹಿ ಶಂಕ್ರಪ್ಪ ರಾಜಪ್ಪ ಕರಡಿ ಅವರ ಕುರಿಗಳಾಗಿವೆ. ಹೊಲದ ಹಟ್ಟಿಯಲ್ಲಿದ್ದ ಕುರಿಗಳ ಮೇಲೆ ಚಿರತೆ ದಾಳಿ ಮಾಡಿದೆ. ನೇಲಜೇರಿ ಸುತ್ತಮುತ್ತಲಿನ ಜನರು ಚಿರತೆ ದಾಳಿಗೆ ಹೆದರಿದ್ದು, ಜಮೀನಿನ ಕೆಲಸಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ.

ಜೀವನಕ್ಕೆ ಆಧಾರವಾಗಿದ್ದ ಕುರಿಗಳು ಚಿರತೆ ದಾಳಿಗೆ ಸತ್ತಿವೆ. ಈಗ ಆರ್ಥಿಕವಾಗಿ ಸಂಕಷ್ಟ ಎದುರಾಗಿದೆ. ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಲಿ ಎಂದು ಕುರಿಗಾಹಿ ಶಂಕ್ರಪ್ಪ ಕರಡಿ ಒತ್ತಾಯಿಸಿದರು.

ಉಪ ವಲಯ ಅರಣ್ಯಾಧಿಕಾರಿ ಲಿಂಗರಾಜ ಸ್ಥಳಕ್ಕೆ ಭೇಟಿ ನೀಡಿ, ಕುರಿಗಳು ಚಿರತೆದಾಳಿಯಿಂದ ಸತ್ತಿವೆ ಎಂದು ದೃಢಪಡಿಸಿದ್ದಾರೆ. ಗ್ರಾಮ ಹೊರವಲಯದಲ್ಲಿ ಚಿರತೆ ಸೆರೆಗೆ ಬೋನು ಅಳವಡಿಸಲಾಗಿದೆ.

ನೆಲಜೇರಿ ಗ್ರಾಮದಲ್ಲಿ ಕುರಿಗಳ ಮೇಲೆ ಚಿರತೆ ದಾಳಿ ಮಾಡಿರುವ ವರದಿ ಪಡೆಯಲಾಗಿದೆ. ಚಿರತೆ ಓಡಾಟ ಇರುವುದರಿಂದ ಜನ ಎಚ್ಚರಿಕೆ ವಹಿಸಬೇಕು. ಅಲ್ಲದೆ ಚಿರತೆ ಸೆರೆ ಹಿಡಿಯಲು ಕ್ರಮ ಕೈಗೊಳ್ಳಲಾಗಿದೆ.

ಸ್ವಾತಿ

ವಲಯ ಅರಣ್ಯಾಧಿಕಾರಿ ಕೊಪ್ಪಳ