ವೆಂಕಟಾಪೂರದ ಕಾಶಿಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಆಯೋಜಿಸಿದ್ದ ಸಮುದಾಯ ಭವನದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಮಾತನಾಡಿದರು. ಸಿದ್ದಪ್ಪ ಪೂಜಾರಿ, ಶಿವಾನಂದ ಉದಪುಡಿ, ಲೋಕಣ್ಣ ಕೊಪ್ಪದ, ಗೋವಿಂದಪ್ಪ ಕೌಲಗಿ, ಹೊಳಬಸು ದಂಡಿನ ಮತ್ತಿತರರಿದ್ದಾರೆ. 
ಜಿಲ್ಲೆ

ಶೀಘ್ರದಲ್ಲೇ ವಿದ್ಯುತ್ ಘಟಕಕ್ಕೆ ಅಡಿಗಲ್ಲು ಪೂಜೆ

ಲೋಕಾಪುರ: ಈ ಭಾಗದ ರೈತರ ಅನುಕೂಲಕ್ಕಾಗಿ ಶೀಘ್ರದಲ್ಲೇ ಚಿತ್ರಭಾನುಕೋಟಿ ಗ್ರಾಮದಲ್ಲಿ 400 ಕೆ.ವಿ ಸಾಮಾರ್ಥ್ಯದ ವಿದ್ಯುತ್ ಘಟಕ ಸ್ಥಾಪಿಸಲು ಅಡಿಗಲ್ಲು ಪೂಜೆ ನೆರವೇರಿಸಲಾಗುವುದು ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.

ಪಟ್ಟಣದ ವೆಂಕಟಾಪೂರದ ಕಾಶಿಲಿಂಗೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಸಮುದಾಯ ಭವನದ ಭೂಮಿಪೂಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವೆಂಕಟಾಪೂರದ ಶ್ರೀ ಕಾಶಿಲಿಂಗೇಶ್ವರ ದೇವಸ್ಥಾನದ ಭಕ್ತರಿಗಾಗಿ ಸಮುದಾಯ ಭವನ ನಿರ್ಮಾಣ ಮಾಡಲಾಗುತ್ತಿದೆ ಎಂದರು.

ಮುಧೋಳ ನಗರದಲ್ಲಿ 177 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರು ಹಾಗೂ ತಾಯಿ-ಮಕ್ಕಳ ಆಸ್ಪತ್ರೆ ನಿರ್ಮಿಸಲಾಗುವುದು. ಪಟ್ಟಣ ಅಭಿವೃದ್ಧಿ ಭರದಿಂದ ಸಾಗುತ್ತಿದ್ದು ಮುಂದಿನ, ದಿನಗಳಲ್ಲಿ ಲೋಕಾಪುರ ಪಟ್ಟಣದ ನೀಲನಕ್ಷೆ ತಯಾರಿಸಿ ಇನ್ನಷ್ಟು ಅಭಿವೃದ್ಧಿಗೆ ಮುಂದಾಗುತ್ತೇವೆ ಎಂದರು.

ದೇವಸ್ಥಾನ ಅರ್ಚಕ ಸಿದ್ದಪ್ಪ ಪೂಜಾರಿ ಸಾನ್ನಿಧ್ಯ ವಹಿಸಿದ್ದರು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತ ನಿರ್ಮಾಣ ಮಾಡಲು ಕಾಶಿಲಿಂಗೇಶ್ವರ ದೇವಸ್ಥಾನ ಭಕ್ತರು ಹಾಗೂ ಹಾಲುಮತ ಸಮಾಜದವರಿಂದ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ಜಿಲ್ಲಾ ಬಿಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಶಿವಾನಂದ ಉದಪುಡಿ, ಲೋಕಣ್ಣ ಕೊಪ್ಪದ, ಗೋವಿಂದಪ್ಪ ಕೌಲಗಿ, ಹೊಳಬಸು ದಂಡಿನ, ಸೋಮರಾಯ ತುಂಗಳ, ಸಿದ್ದಪ್ಪ ಹರಕಂಗಿ, ನಾಗಪ್ಪ ಗುಡ್ಡದ, ಮಾಯಪ್ಪ ಗಡ್ಡದವರ, ತಿಪ್ಪಣ್ಣ ಕಿಲಾರಿ, ಪಪಂ ಮುಖ್ಯಾಧಿಕಾರಿ ಜ್ಯೋತಿ ಉಪ್ಪಾರ, ಅಬ್ದುಲ್‌ರಹಮಾನ ತೊರಗಲ, ಸುಲ್ತಾನ ಕಲಾದಗಿ, ಕಾಶಿಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸೇವಾ ಸಮಿತಿ ಅದ್ಯಕ್ಷ ಮುತ್ತಪ್ಪ ಗಡ್ಡದವರ, ಕಾರ್ಯದರ್ಶಿ ಬಾಳು ಗಡ್ಡದವರ, ಸಿಂಗಾಡಪ್ಪ ಗಡ್ಡದವರ, ಸಿದ್ದು ಕಿಲಾರಿ ಮತ್ತಿತರರಿದ್ದರು. ಶಿಕ್ಷಕ ಮುತ್ತು ತುಂಗಳ ನಿರೂಪಿಸಿದರು.