ಕುಶಾಲನಗರ: ಕೂಡಿಗೆಯ ಡಯಟ್ ಮತ್ತು ಪ್ರಾಥಮಿಕ ಶಾಲೆ ಆಟದ ಮೈದಾನದ ಸುತ್ತಲೂ ಕೂಡಿಗೆಯ ಮಾರ್ನಿಂಗ್ ಬಾಯ್ಸ ತಂಡದ ವತಿಯಿಂದ ಸೋಮವಾರ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗಿತ್ತು.
ತಂಡದ 20ಕ್ಕೂ ಹೆಚ್ಚು ಯುವಕರು ಶ್ರಮದಾನ ಮಾಡುವ ಮೂಲಕ ಮೈದಾನ ಶುಚಿತ್ವ ಮಾಡಿದರು. ಸಣ್ಣ ಗಿಡಗಳನ್ನು ಬೇರು ಸಮೇತ ಕಿತ್ತು, ಮರಗಳ ಕೊಂಬೆ ಕಡಿದು ಕ್ರೀಡಾಪಟುಗಳಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಯಿತು.
ಮಾರ್ನಿಂಗ್ ಬಾಯ್ಸ ಪ್ರಮುಖ ಸೋಮು ಮಾತನಾಡಿ, ಈ ಮೈದಾನದಿಂದ ಸಾವಿರಾರು ಕ್ರೀಡಾ ಪ್ರತಿಭೆಗಳು ಪರಿಚಯವಾಗಿದೆ. ತರಬೇತಿ ಪಡೆಯುವ ಕ್ರೀಡಾಪಟುಗಳಿಗೆ ಉಪಯೋಗ ಕಲ್ಪಿಸುವ ನಿಟ್ಟಿನಲ್ಲಿ ಮೈದಾನ ಸ್ವಚ್ಛಗೊಳಿಸಲಾಗಿದೆ ಎಂದರು.
ತಂಡದ ಅಜೀಜ್, ಅನೀಲ್, ಸಂತು, ವಿನು, ಜೆಪಿ, ಷರೀಫ್, ಮುಜೀಬ್, ಶಂಶು, ಪ್ರಮೋದ್, ರಫಿಕ್, ಆಸಿಫ್ ಇತರರು ಇದ್ದರು.