ತಾವರಗೇರಾ: ಗೃಹಲಕ್ಷ್ಮೀ ಯೋಜನೆ ನೋಂದಣಿಗೆ ಜಿಲ್ಲಾದ್ಯಂತ 400 ಕೌಂಟರ್ ತೆರೆದಿದ್ದು, ಪ್ರತಿದಿನ ಒಂದಕ್ಕೆ 60 ಮಹಿಳೆಯರಿಗೆ ನೋಂದಣಿ ಪತ್ರ ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದು ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಹೇಳಿದರು.
ಸಮೀಪದ ಮೆಣೇಧಾಳದಲ್ಲಿ 1.36 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಿರುವ ಗ್ರಾಪಂ ನೂತನ ಕಟ್ಟಡದ ಪರಿಶೀಲನೆ ನಡೆಸಿ ಮಾತನಾಡಿದರು. ಜಿಲ್ಲೆಯಲ್ಲಿ ಈ ಯೋಜನೆ ಅನುಷ್ಠಾನಕ್ಕೆ 400 ಕೇಂದ್ರಗಳನ್ನು ತೆರೆಯಲಾಗಿದೆ. ಮಹಿಳೆಯರು ತಮ್ಮ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್‌ನಲ್ಲಿ ನಮೂದಿಸಿದ ಸಂಖ್ಯೆಯ ಮೊಬೈಲ್ ಫೋನ್ ತೆಗೆದುಕೊಂಡು ಹೋಗಬೇಕು. ಭಾನುವಾರ ಹೊರತುಪಡಿಸಿ ಪ್ರತಿದಿನ ಬೆಳಗ್ಗೆ 9ರಿಂದ ಸಂಜೆ 8ರವರೆಗೆ ಕೌಂಟರ್ ತೆರೆದಿರುತ್ತದೆ.
ಇದನ್ನೂ ಓದಿ: ಗೃಹಲಕ್ಷ್ಮೀಗಾಗಿ ಮಳೆಯಲ್ಲಿ ನಿಂತ ನಾರಿಯರು
ಪಿಡಿಒ, ಕಾರ್ಯದರ್ಶಿಗಳು ನೋಡಲ್ ಅಧಿಕಾರಿಗಳಾಗಿರುತ್ತಾರೆ. ಕೌಂಟರ್‌ಗಳು ಎಲ್ಲಿರುತ್ತವೆ ಎಂಬ ಮಾಹಿತಿಯನ್ನು ಅಂಗನವಾಡಿ ಕಾರ್ಯಕರ್ತೆಯರು ತಿಳಿಸುತ್ತಾರೆಂದರು. ತಾಪಂ ಮುಖ್ಯಾಧಿಕಾರಿ ಶಿವಪ್ಪ ಸುಬೇದಾರ , ಪಿಎಸ್‌ಐ ತಿಮ್ಮಣ್ಣ ನಾಯಕ, ಮಹೆಬೂಬ್ ಸಾಬ್ ಇದ್ದರು.