ನಾಲತವಾಡ: ರಾಜ್ಯದಲ್ಲಿ ಆ.30 ರಂದು ಗೃಹಲಕ್ಷ್ಮೀ ಯೋಜನೆಗೆ ಅಧಿಕೃತ ಚಾಲನೆ ನೀಡುವ ಕಾರ್ಯಕ್ರಮ ವೀಕ್ಷಿಸಲು ಅರ್ಜಿ ಸಲ್ಲಿಸಿದ ಮನೆ ಯಜಮಾನಿಗೆ ಸಮೀಪದ ಅಡವಿ ಸೋಮನಾಳದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಕುಂಕುಮವಿಟ್ಟು ಸೋಮವಾರ ಆಹ್ವಾನಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಶಿಶು ಅಭಿವೃದ್ಧಿ ಯೋಜನೆ ಮುದ್ದೇಬಿಹಾಳ ಹಾಗೂ ಹಿರೇಮುರಾಳ ವಲಯದ ಅಡವಿ ಸೋಮನಾಳದ ಅಂಗನವಾಡಿ ಕೇಂದ್ರದಡಿ ಆಹ್ವಾನಿಸುವ ಕಾರ್ಯ ನಡೆಯಿತು.
ಗೃಹಲಕ್ಷ್ಮೀ ಯೋಜನೆಗೆ ಅಧಿಕೃತ ಚಾಲನೆ ನೀಡುವುದನ್ನು ಸರ್ಕಾರ ಆಯಾ ಗ್ರಾಪಂನಲ್ಲಿ ನೇರಪ್ರಸಾರ ಮಾಡುತ್ತಿದ್ದು, ಟಿವಿ ಪರದೆಯಲ್ಲಿ ವೀಕ್ಷಣೆ ಮಾಡಲು ಭಾಗವಹಿಸುವಂತೆ ಪ್ರೇರಣೆ ನೀಡಿದರು.
ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ವಿಬಿಎಸ್ ಮೇಟಿ, ವಿಜಯಲಕ್ಷ್ಮೀ ಮಂಟೂರಕರ, ಮಾಳವ್ವ ಮನಗೂಳಿ, ಕಾರ್ಯಕರ್ತೆಯರಾದ ಸುನಂದಾ ಸೇಲಾರ್, ಬಸಮ್ಮ ಕಡಿ, ಅಂಜನಾದೇವಿ ಪತ್ತಾರ, ವಿನೋದಾ ಚಿಮ್ಮಲಗಿ, ನಾಗಮ್ಮ ನರೋಡಿ, ಶಾರದಾ ಪೂಜಾರಿ, ದೇವಮ್ಮ ಪೂಜಾರಿ, ಪಾರ್ವತಿ ಕೂಡಲಗಿ, ಭಾಗಮ್ಮ ಗುರವಿನ, ವಿಜಯಲಕ್ಷ್ಮೀ ಗುರುವಿನ, ರಾಜೇಶ್ವರಿ ಗೋನಾಳ, ರೇಣುಕಾ ಪೂಜಾರಿ, ನಾಗಮ್ಮ ವಡ್ಡರ, ಯಮನವ್ವ ಮನಶ್ಯಾಳ, ಲಕ್ಷ್ಮೀಬಾಯಿ ಕುರುಬಗೌಡ, ಗೀತಾ ಬಿರಾದಾರ, ಪದ್ಮಾವತಿ ಹಗರಗುಂಡ, ಮಲ್ಲಮ್ಮ ವಾಲಿಕಾರ, ಮಲ್ಲಮ್ಮ ಸರೂರ, ಲಕ್ಷ್ಮೀ ಸಂಗ್ಲಿ ಕಾರ್ಯಕ್ರಮದ ಅರಿವು ಮೂಡಿಸುವಲ್ಲಿ ಸಾಥ್ ನೀಡಿದರು.