ರಾಯಬಾಗ ತಾಲೂಕಿನ ಮಂಟೂರಿನಲ್ಲಿ ಗ್ರಾಪಂ ಸದಸ್ಯೆ ಮಲ್ಲವ್ವ ಭೀಮಪ್ಪ ಮೇಟಿ ಗೃಹಲಕ್ಷ್ಮೀ ಹಾಗೂ ಗ್ರಾಪಂ ಗೌರವಧನದಿಂದ ನಿರ್ಮಾಣ ಮಾಡಿರುವ ಗ್ರಂಥಾಲಯ. 
ಜಿಲ್ಲೆ

ಗೃಹಲಕ್ಷ್ಮಿ ಹಣದಲ್ಲಿ ಗ್ರಂಥಾಲಯ

ರಾಯಬಾಗ: ತಾಲೂಕಿನ ಮಂಟೂರ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯೆ ಮಲ್ಲವ್ವ ಭೀಮಪ್ಪ ಮೇಟಿ ಗೃಹಲಕ್ಷ್ಮಿ ಯೋಜನೆಯ 13 ಕಂತಿನ ಹಣ, ಗೌರವಧನವನ್ನು ಗ್ರಂಥಾಲಯ ನಿರ್ಮಾಣಕ್ಕೆ ನೀಡಿದ್ದಾರೆ. ಇದರ ಜತೆಗೆ, ಗ್ರಾಮಸ್ಥರ ಸಹಾಯದಿಂದ ಗ್ರಾಮದ ಮಕ್ಕಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗಲೆಂದು ಒಂದು ಲಕ್ಷ ರೂಪಾಯಿ ವೆಚ್ಚದಲ್ಲಿ ಗ್ರಂಥಾಲಯ ಸ್ಥಾಪಿಸಲಾಗಿದೆ. ಗೃಹಲಕ್ಷ್ಮಿ 13 ಕಂತಿನ 26 ಸಾವಿರ ರೂ., ಪಂಚಾಯಿತಿ ಸದಸ್ಯತ್ವದ ಗೌರವಧನ 45 ಸಾವಿರ ರೂ. ಹಾಗೂ ಗ್ರಾಮದ ಸಾರ್ವಜನಿಕರ 15 ಸಾವಿರ ರೂ. ಸೇರಿಸಿ ಮಕ್ಕಳ ಸಹಕಾರದಿಂದ ಗ್ರಾಮದಲ್ಲಿ ಸಣ್ಣ ಗ್ರಂಥಾಲಯ ನಿರ್ಮಾಣ ಮಾಡಿದ್ದಾರೆ. ಗ್ರಾಮದಲ್ಲಿ ಗ್ರಂಥಾಲಯ ಇಲ್ಲದ ಕಾರಣ, ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ತಮ್ಮ ಮಕ್ಕಳ ಸಹಕಾರದಿಂದ ಗ್ರಾಮದ ಬೀರೇಶ್ವರ ದೇವಸ್ಥಾನದ ಸಮೀಪದ ಕೋಣೆಯಲ್ಲಿ ಸಣ್ಣ ಪ್ರಮಾಣದಲ್ಲಿ ಗ್ರಂಥಾಲಯ ಆರಂಭಿಸಲಾಗಿದೆ. ಭಾನುವಾರ ಗ್ರಾಮಸ್ಥರ ಸಮ್ಮುಖದಲ್ಲಿ ಉದ್ಘಾಟನೆ ನೆರವೇರಿಸಲಾಗಿದೆ. ಗ್ರಾಮದ ಕೆಲ ಯುವಕರು ಈ ಗ್ರಂಥಾಲಯಕ್ಕೆ ಪುಸ್ತಕಗಳನ್ನು ದೇಣಿಗೆ ನೀಡಿದ್ದಾರೆ.