ಹೊಸಪೇಟೆ ಎಸ್ಪಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ-ಪಂಗಡಗಳ ಕುಂದುಕೊರತೆ ಸಭೆ ನಡೆಯಿತು. ಪ್ರಮುಖರಾದ ಶ್ರೀನಾಥ, ಬಸವರಾಜ, ಉಮಾಪತಿ, ವೆಂಕಟೇಶ, ಭರಮಪ್ಪ ಇತರರಿದ್ದರು. 
ಜಿಲ್ಲೆ

ಕುಂದುಕೊರತೆ ಸಭೆ ನಿರಂತರ ನಡೆಯಲಿ

ಗಾಯತ್ರಿ ಮಾಲಿಪಾಟೀಲ್

ಹೊಸಪೇಟೆ: ನಗರದ ಎಸ್ಪಿ ಕಚೇರಿ ಸಭಾಂಗಣದಲ್ಲಿ ಗುರುವಾರ ಎಸ್ಪಿ ಬಿ.ಎಲ್.ಶ್ರೀಹರಿಬಾಬು ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ-ಪಂಗಡಗಳ ಕುಂದುಕೊರತೆ ಸಭೆ ನಡೆಯಿತು. ಜಿಲ್ಲಾಧಿಕಾರಿ ಹಾಗೂ ಎಸ್ಪಿ ಕಚೇರಿಯಿಂದ ತಾಲೂಕು ಹಾಗೂ ಜಿಲ್ಲಾ ಮಟ್ಟದ ಕುಂದು ಕೊರತೆ ಸಭೆಗಳನ್ನು ನಡೆಸುವುದರಿಂದ ಸಮಸ್ಯೆಗಳ ಬಗ್ಗೆ ನೇರವಾಗಿ ಚರ್ಚಿಸಬಹುದು. ದಲಿತ ದೌರ್ಜನ್ಯ ಪ್ರಕರಣ ದಾಖಲಾದಾಗ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಸಂತ್ರಸ್ತರ ಮನೆಗೆ ಭೇಟಿ ನೀಡಬೇಕು. ಕಂದಾಯ ಇಲಾಖೆಯಿಂದ ದಲಿತರ ಭೂಮಿ ವಿಚಾರಕ್ಕೆ ಹಲವಾರು ಸಮಸ್ಯೆಗಳಿರುವುದರಿಂದ ಈ ಬಗ್ಗೆ ಚರ್ಚಿಸಲು ಜಿಲ್ಲಾ ಮಟ್ಟದ ಸಭೆ ನಡೆಸಬೇಕು ಎಂದು ಸಮುದಾಯದವರು ಒತ್ತಾಯಿಸಿದರು. ಡಿವೈಎಸ್ಪಿಗಳಾದ ಟಿ.ಮಂಜುನಾಥ, ಮಲ್ಲೇಶ್ ದೊಡ್ಡಮನಿ, ಪಿಐಗಳಾದ ರಘುನಾಥ, ಪಕೀರಮ್ಮ, ಅಬಕಾರಿ ನಿರೀಕ್ಷಕಿ ಶೈನಾಜ್ ಬೇಗಂ ಇತರರಿದ್ದರು.