ಇಂಡಿ ನಗರದ ಇಂಡಿ ನಗರದ ಜಿಆರ್‌ಜಿ ಕಲಾ ಹಾಗೂ ವೈ.ಎ. ಪಾಟೀಲ ವಾಣಿಜ್ಯ ಮತ್ತು ಎಂ.ಎಫ್. ಜೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ‘ಗುರು ವಂದನಾ ಹಾಗೂ ಹಿರಿಯ ವಿದ್ಯಾರ್ಥಿಗಳ ಪುನರ್ಮಿಲನ’ ಕಾರ್ಯಕ್ರಮ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ತಡವಲಗಾ ಹಿರೇಮಠದ ಷಬ್ರ ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ನೀಲಕಂಠಗೌಡ ಎಸ್.ಪಾಟೀಲ, ಡಾ.ಎಸ್.ಬಿ. ಜಾಧವ ಮತ್ತಿತರರಿದ್ದಾರೆ.  
ಜಿಲ್ಲೆ

ಇಂಡಿಯಲ್ಲಿ ಗುರು ವಂದನೆ, ಸ್ನೇಹಿತರ ಸಮಾಗಮ, ಅವಿಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾದ ಜಿಆರ್‌ಜಿ ಕಾಲೇಜ್ !

ಇಂಡಿ: ಸ್ನೇಹಿತರ ಸಮಾಗಮ, ಹಿರಿಯ ವಿದ್ಯಾರ್ಥಿಗಳಿಂದ ಗೌರವ, ಗುರುವಿಗೆ ಭಾವ ಪೂರ್ಣ ನಮನ, ಹಳೆಯ ನೆನಪುಗಳು ಹಾಗೂ ಶೈಕ್ಷಣಿಕ ಜೀವನದ ಅವಿಸ್ಮರಣೀಯ ಕ್ಷಣಗಳನ್ನು ಮೆಲಕು ಹಾಕುವ ಅಪರೂಪದ ಕಾರ್ಯಕ್ರಮವೊಂದಕ್ಕೆ ಇಂಡಿ ನಗರದ ಜಿಆರ್‌ಜಿ ಕಲಾ ಹಾಗೂ ವೈ.ಎ. ಪಾಟೀಲ ವಾಣಿಜ್ಯ ಮತ್ತು ಎಂ.ಎಫ್. ಜೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯ ಸಾಕ್ಷಿಯಾಯಿತು.

ಕಾಲೇಜಿನ 2004-07ನೇ ಸಾಲಿನ ವಿದ್ಯಾರ್ಥಿಗಳು ಭಾನುವಾರ ಹಮ್ಮಿಕೊಂಡಿದ್ದ ‘ಗುರು ವಂದನಾ ಹಾಗೂ ಹಿರಿಯ ವಿದ್ಯಾರ್ಥಿಗಳ ಪುನರ್ಮಿಲನ’ ಕಾರ್ಯಕ್ರಮ ಅಪರೂಪದಲ್ಲಿಯೇ ಅಪರೂಪ ಎನ್ನುವಂತೆ ನೆರವೇರಿತು.

ರಾಜ್ಯದ ನಾನಾ ಭಾಗಗಳಿಂದ ಬಂದ ನೂರಾರು ವಿದ್ಯಾರ್ಥಿಗಳು ತಮ್ಮ ಗುರುಗಳಿಗೆ ಭಾವಪೂರ್ಣ ನಮನ ಸಲ್ಲಿಸುತ್ತಿದ್ದರೆ ನೆರೆದವರ ಕಣ್ಣಾಲೆಗಳು ತೇವಗೊಂಡವು. ನಿವೃತ್ತಿಯಾದರೂ ಸ್ಮರಿಸಿ ಗೌರವಿಸಿದ ವಿದ್ಯಾರ್ಥಿಗಳ ಪ್ರಿತ್ಯಾಧಾರಗಳಿಗೆ ಶಿಕ್ಷಕರು ಮನಸೋತರು. ಸಾರ್ಥಕ ಭಾವ ತುಂಬಿಕೊಂಡರು.

ಸಾನ್ನಿಧ್ಯ ವಹಿಸಿದ್ದ ತಡವಲಗಾ ಹಿರೇಮಠದ ಷಬ್ರ ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ಹೆತ್ತ ತಂದೆ-ತಾಯಿ ಹಾಗೂ ಗುರುವಿನ ಋಣ ತೀರಿಸಲಾಗದಂಥದ್ದು. ಬದುಕು ಶ್ರೀಮಂತಗೊಳಿಸಿದ ಶಿಕ್ಷಕರನ್ನು ಸ್ಮರಿಸುವುದು ವಿದ್ಯಾರ್ಥಿಗಳಾದವರ ಭಾಗ್ಯ ಮತ್ತು ಪುಣ್ಯದ ಕಾರ್ಯ ಎಂದರು.

ಸಂಸ್ಥೆಯ ಉಪಾಧ್ಯಕ್ಷ ನೀಲಕಂಠಗೌಡ ಎಸ್.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಡಾ.ಎಸ್.ಬಿ. ಜಾಧವ ಮಾತನಾಡಿದರು.

ಶಿಕ್ಷಕರಾದ ಡಿ.ಎ. ಢವಳಗಿಮಠ, ವಿ.ಎಚ್. ಬಿರಾದಾರ, ಎಸ್.ಎಸ್. ಬಿರಾದಾರ, ಎಂ.ಸಿ. ಮಂಗಳೂರು, ಆರ್.ವಿ. ದೇಶಪಾಂಡೆ, ಎನ್.ವಿ. ಹಂಜಗಿ, ಎಸ್.ಎಸ್. ಪಾಟೀಲ, ಎಸ್.ಜಿ. ಬೆಳಕಿಂಡಿ, ವಿ.ಎಸ್. ಲಾಳಸಂಗಿ, ಸಿ.ಎ. ಬಿರಾದಾರ ಮುಂತಾದವರನ್ನು ಸನ್ಮಾನಿಸಿ ಗೌರವಿಸಲಾಯಿತು.

ನೀಲಕಂಠಗೌಡ ಪಾಟೀಲ, ಪ್ರವೀಣ ಕುಲಕರ್ಣಿ, ಬಿರೇಶ ಡೋಣಿ, ಗುಂಡುಗೌಡ ಬಿರಾದಾರ, ಹಳೆಯ ವಿದ್ಯಾರ್ಥಿಗಳಾದ ಗುಂಡುಗೌಡ ಪಾಟೀಲ, ಕುಮಾರಗೌಡ ಪಾಟೀಲ, ಟೋಪನಗೌಡ ಪಾಟೀಲ, ಸಿದ್ದು ತಮಶೆಟ್ಟಿ, ಎಂ.ಎಸ್. ಬಿರಾದಾರ, ಉಮೇಶ ಲಚ್ಯಾಣ, ಉಮೇಶ ಹೊಸಮನಿ, ಸಿದ್ದು ಬಿರಾದಾರ, ಸುರೇಶ ಪೂಜಾರಿ, ನೀಜಗುಣಿ ದಾಶ್ಯಾಳ, ಸಂತೋಷ ಜಾಧವ ಮತ್ತಿತರರಿದ್ದರು.

ಜೈಲರ್ ಸಿದ್ಧು ನಾವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಕಾಶ ಕರಿಗಣ್ಣವರ ಹಾಗೂ ಚಿದಾನಂದಗೌಡ ಬಿರಾದಾರ ನಿರ್ವಹಿಸಿದರು. ನಾಗನಾಥ ಕೌಲಗಿ ವಂದಿಸಿದರು.