ಹಗರಿಬೊಮ್ಮನಹಳ್ಳಿಯಲ್ಲಿ ಪೂರ್ವಭಾವಿ ಸಭೆ ನಡೆಯಿತು. ಶಾಸಕ ಕೆ.ನೇಮಿರಾಜ್‌ನಾಯ್ಕ, ರಾಷ್ಟ್ರೀಯ ಹಬ್ಬಗಳ ಸಮಿತಿ ಅಧ್ಯಕ್ಷರಾದ ತಹಸೀಲ್ದಾರ್ ಕವಿತಾ, ಉಪತಹಸೀಲ್ದಾರ್ ಶಿವಕುಮಾರ್‌ಗೌಡ, ನರೇಗಾ ಯೋಜನೆ ತಾಲೂಕು ಅಧಿಕಾರಿ ರಮೇಶ್ ಮಹಾಲಿಂಗಪುರ, ಶಾಸಕರ ಆಪ್ತ ಸಹಾಯಕ ದೊಡ್ಡಬಸಪ್ಪ ರಡ್ಡಿ ಇತರರಿದ್ದರು. 
ಜಿಲ್ಲೆ

ಹಸಿರು ಉಳಿವಿನ ಪುಟ್ಟ ಸಂಕಲ್ಪ ಮಾಡಿ

Kopala - Desk - Eraveni

ಹಗರಿಬೊಮ್ಮನಹಳ್ಳಿ: ಸ್ವಾತಂತ್ರೋತ್ಸವ ಆಚರಣೆಯನ್ನು ಕ್ಷೇತ್ರದ ಜನರು ಲಕ್ಷ ಸಸಿಗಳನ್ನು ನೆಡುವ ಮೂಲಕ ಭವಿಷ್ಯದ ಬೆಳಕಿಗೆ ಮುನ್ನುಡಿ ದೀಪ ಹಚ್ಚೋಣ ಎಂದು ಶಾಸಕ ಕೆ.ನೇಮಿರಾಜ್‌ನಾಯ್ಕ ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸ್ವಾತಂತ್ರೃ ದಿನಾಚರಣೆ ಪೂರ್ವಭಾವಿ ಸಭೆಯಲ್ಲಿ ಸೋಮವಾರ ಮಾತನಾಡಿದರು.
ಅಧಿಕಾರಿಗಳು ಗ್ರಾಮೀಣ ಜನರಿಗೆ ಜಾಗೃತಿ ಮೂಡಿಸಬೇಕು, ಸ್ವಾತಂತ್ರ ಹೋರಾಟಗಾರರ ನೆನಪಿಗಾಗಿ ಲಕ್ಷ ಸಸಿ ನೆಟ್ಟು ದೀಪ ಬೆಳಗಿಸಿ ಹಸಿರು ಬೆಳಕು ಉಳಿವಿನ ಪುಟ್ಟ ಸಂಕಲ್ಪ ಮಾಡೋಣ.

ಆ.14ರಂದು ಪ್ರತಿಯೊಬ್ಬರು ಸಸಿ ನೆಟ್ಟು ಅದನ್ನು ಉಳಿಸಿ ಬೆಳೆಸುವ ಪ್ರತಿಜ್ಞೆ ಮಾಡಿ ಸಂಜೆ ಮನೆಯಲ್ಲಿ ದೀಪ ಬೆಳಗಿಸಿ ಭೂಮಂಡಲದ ಸ್ವಾಸ್ತ್ಯ ಆರೋಗ್ಯ ಪೂರ್ಣ ನಿರ್ಮಾಣದ ಸಂಕಲ್ಪ ಮಾಡುವ ಮೂಲಕ 78ನೇ ಸ್ವಾತಂತ್ರ್ಯ ಸಂಭ್ರಮದ ಅರ್ಥಪೂರ್ಣ ಆಚರಣೆಗೆ ಸಾಕ್ಷಿಯಾಗೋಣ ಎಂದರು.

ರಾಷ್ಟ್ರೀಯ ಹಬ್ಬಗಳ ಸಮಿತಿ ಅಧ್ಯಕ್ಷರಾದ ತಹಸೀಲ್ದಾರ್ ಕವಿತಾ, ಉಪತಹಸೀಲ್ದಾರ್ ಶಿವಕುಮಾರ್‌ಗೌಡ, ನರೇಗಾ ಯೋಜನೆ ತಾಲೂಕು ಅಧಿಕಾರಿ ರಮೇಶ್ ಮಹಾಲಿಂಗಪುರ, ಶಾಸಕರ ಆಪ್ತ ಸಹಾಯಕ ದೊಡ್ಡಬಸಪ್ಪ ರಡ್ಡಿ ಇತರರಿದ್ದರು.