ಮಂಡ್ಯ: ನಗರದ ಹೌಸಿಂಗ್‌ಬೋರ್ಡ್‌ನಲ್ಲಿ ಒಂದು ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಹೈಟೆಕ್ ಗ್ರೀನ್‌ಮ್ಯಾಟ್ ಕ್ರೀಡಾಂಗಣದ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಭೂಮಿ ಪೂಜೆ ನೆರವೇರಿಸಿದರು.
ಶಾಸಕ ರವಿಕುಮಾರ್ ಗಣಿಗ ಮಾತನಾಡಿ, ಕ್ರೀಡಾಪಟುಗಳು ಹಾಗೂ ಮಕ್ಕಳಲ್ಲಿ ಕ್ರೀಡೆಗಳ ಬಗ್ಗೆ ಪ್ರೋತ್ಸಾಹಿಸಲು ಹೈಟೆಕ್ ಗ್ರೀನ್ ಮ್ಯಾಟ್ ಕ್ರೀಡಾಂಗಣ ನಿರ್ಮಿಸಲಾಗುತ್ತಿದೆ. ಇಲ್ಲಿ ವಾಲಿಬಾಲ್, ಥ್ರೋ ಬಾಲ್, ಕ್ರಿಕೆಟ್, ಫುಟ್‌ಬಾಲ್ ಆಡಬಹುದು. ಇಂತಹ ಕ್ರೀಡಾಂಗಣ ಬೆಂಗಳೂರಿನಲ್ಲಿದ್ದು, ಇದೇ ಮೊದಲ ಬಾರಿಗೆ ಮಂಡ್ಯ ಜಿಲ್ಲೆಯಲ್ಲಿ ನಿರ್ಮಿಸಲಾಗುತ್ತಿದೆ. 3 ತಿಂಗಳೊಳಗಾಗಿ ಕಾಮಗಾರಿ ಪೂರ್ಣಗೊಳಿಸಿ ಸಚಿವ ಚಲುವರಾಯಸ್ವಾಮಿ ಅವರಿಂದಲೇ ಉದ್ಘಾಟಿಸಲಾಗುವುದು ಎಂದರು. ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಉಪಾಧ್ಯಕ್ಷ ಎಂ.ಟಿ.ಅರುಣ್‌ಕುಮಾರ್, ಸದಸ್ಯೆ ಶಶಿಕಲಾ ಇತರರಿದ್ದರು.
ಅಂತೆಯೇ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕಾರೆಮನೆ ಗೇಟ್ ಬಳಿ 25 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾಗಿರುವ 4 ಅಂಗಡಿ ಮಳಿಗೆಯನ್ನು ಸಚಿವ ಎನ್.ಚಲುವರಾಯಸ್ವಾಮಿ ಲೋಕಾರ್ಪಣೆಗೊಳಿಸಿದರು. ಶಾಸಕ ರವಿಕುಮಾರ್ ಗಣಿಗ, ಮುಡಾ ಅಧ್ಯಕ್ಷ ನಯೀಂ, ಮುಡಾ ಆಯುಕ್ತೆ ವೀಣಾ ಇತರರಿದ್ದರು.