ಹಾನಗಲ್ಲ: ತಮ್ಮ ಪ್ರದೇಶಾಭಿವೃದ್ಧಿ ಅನುದಾನದಡಿ 12 ಲಕ್ಷ ರೂ. ವೆಚ್ಚದಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ಒದಗಿಸಿದ ನೂತನ ವಾಹನಕ್ಕೆ ಶಾಸಕ ಶ್ರೀನಿವಾಸ ಮಾನೆ ಮಂಗಳವಾರ ಹಸಿರು ನಿಶಾನೆ ತೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಮಾನೆ, ಹಾನಗಲ್ಲ ಪೊಲೀಸ್ ಠಾಣೆಗೆ ಕಳೆದ ಕೆಲ ತಿಂಗಳಿನಿಂದ ವಾಹನ ಇಲ್ಲದೆ ತುರ್ತು ಸಂದರ್ಭದಲ್ಲಿ ಅಗತ್ಯ ಸೇವೆ ಒದಗಿಸಲು ಸಮಸ್ಯೆ ಉಂಟಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ನೂತನ ವಾಹನ ಒದಗಿಸಲಾಗಿದೆ. ಜನಸ್ನೇಹಿಯಾಗಿ ಪೊಲೀಸರು ಕರ್ತವ್ಯ ನಿರ್ವಹಿಸಲಿ ಎಂದರು.
ಎಸ್‌ಪಿ ಅಂಶುಕುಮಾರ, ಶಿಗ್ಗಾಂವಿ ಡಿವೈಎಸ್ಪಿ ಗುರುಶಾಂತಪ್ಪ, ಸಿಪಿಐ ಎನ್.ಎಚ್. ಆಂಜನೇಯ, ಪಿಎಸ್‌ಐ ಸಂಪತ್ ಆನಿಕಿವಿ, ಪುರಸಭೆ ಸದಸ್ಯ ನಾಗಪ್ಪ ಸದವತ್ತಿ, ಆದರ್ಶ ಶೆಟ್ಟಿ, ರಾಜು ಗುಡಿ, ನಿವೃತ್ತ ಶಿಕ್ಷಕ ಕೆ.ಎಲ್. ದೇಶಪಾಂಡೆ, ತಾಪಂ ಮಾಜಿ ಸದಸ್ಯ ರಾಮಣ್ಣ ಶೇಷಗಿರಿ ಇತರರು ಉಪಸ್ಥಿತರಿದ್ದರು.