ಆನೇಕಲ್​ ಹೊರವಲಯದ ಅಲಯನ್ಸ್​ ವಿಶ್ವವಿದ್ಯಾಲಯ, ಭಾರತೀಯ ವಿಾನ ಸಂಸ್ಥೆ (ಐಐಎಸ್​ಸಿ) ಸಂಯುಕ್ತವಾಗಿ ಆಯೋಜಿಸಿದ್ದ "ಹೈಡ್ರೋಜನ್​ ಇಂಧನ ತಂತ್ರಾನಗಳು ಮತ್ತು ಭವಿಷ್ಯದ ಪ್ರವೃತ್ತಿಗಳು' ಎಂಬ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಇಸ್ರೋ ಅಧ್ಯ ಡಾ.ವಿ.ನಾರಾಯಣನ್​, ಸಿಎಸ್​ಐಆರ್​ ಮಹಾನಿರ್ದೇಶಕಿ ಡಾ.ಎನ್​.ಕಲೈಸೆಲ್ವಿ, ಪೊ&ಚಾನ್ಸೆಲರ್​ ಅಭಯ್​ ಜಿ.ಚೆಬ್ಬಿ, ಡಾ.ವಿಜಯಕುಮಾರ್​ ಸರಸ್ವತ್​ ಮೊದಲಾದವರು ಇದ್ದರು. 
ಜಿಲ್ಲೆ

ಹಸಿರು ಇಂಧನ ಭವಿಷ್ಯಕ್ಕೆ ಬೆಳಕು

ಬೆಂಗಳೂರು ಗ್ರಾಮಾಂತರ ಡೆಸ್ಕ್

ಆನೇಕಲ್​ : ಭಾರತದ ಬಾಹ್ಯಾಕಾಶ ಮಿಷನ್​ಗಳು, ಸಾರಿಗೆ ಮತ್ತು ಶುದ್ಧ ಇಂಧನ ಭವಿಷ್ಯದಲ್ಲಿ ಹೈಡ್ರೋಜನ್​ ಇಂಧನ ದೊಡ್ಡಮಟ್ಟದ ಕ್ರಾಂತಿ ಮಾಡಲಿದೆ, ಇದರಿಂದ ದೇಶದ ಪ್ರಗತಿಯ ದಿಕ್ಕು ಬದಲಾಗಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯ ಡಾ.ವಿ.ನಾರಾಯಣನ್​ ತಿಳಿಸಿದರು.

ಪಟ್ಟಣಕ್ಕೆ ಸಮೀಪದ ಅಲಯನ್ಸ್​ ವಿಶ್ವವಿದ್ಯಾಲಯ, ಭಾರತೀಯ ವಿಾನ ಸಂಸ್ಥೆ (ಐಐಎಸ್​ಸಿ) ಸಂಯುಕ್ತವಾಗಿ ಆಯೋಜಿಸಿದ್ದ "ಹೈಡ್ರೋಜನ್​ ಇಂಧನ ತಂತ್ರಾನಗಳು ಮತ್ತು ಭವಿಷ್ಯದ ಪ್ರವೃತ್ತಿಗಳು' ಎಂಬ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಮಾತನಾಡಿದರು. ವಿಶ್ವ ಎರಡು ಸವಾಲು ಎದುರಿಸುತ್ತಿದೆ, ಹೆಚ್ಚುತ್ತಿರುವ ಇಂಧನದ ಬೇಡಿಕೆ ಮತ್ತು ಹಸಿರು ಮನೆ ಅನಿಲಗಳ ಹೊರ ಸೂಸುವಿಕೆ ತಗ್ಗಿಸುವ ತುರ್ತು ಅಗತ್ಯ. ಈ ಸಂದರ್ಭದಲ್ಲಿ ಹೈಡ್ರೋಜನ್​ ಅತ್ಯಂತ ಶುದ್ಧ ಮತ್ತು ಹಸಿರು ಇಂಧನವಾಗಿದ್ದು, ಭವಿಷ್ಯದ ಭರವಸೆಯ ಬೆಳಕಾಗಲಿದೆ ಎಂದು ಹೇಳಿದರು. ಇಸ್ರೋದಲ್ಲಿ ನಮ್ಮ ಹಲವು ಮುನ್ನಡೆಗಳಲ್ಲಿ ಹೈಡ್ರೋಜನ್​ ಮುಖ್ಯವಾಗಿದೆ. ಜನವರಿಯಲ್ಲಿ ಭಾರತವು ಯಶಸ್ವಿಯಾಗಿ ಜಿಎಸ್​ಎಲ್​ವಿ ಮಾರ್ಕ್​ ರಾಕೆಟ್​ ಉಡಾಯಿಸಿತ್ತು, ಇದರಲ್ಲಿ ಲಿಕ್ವಿಡ್​ ಹೈಡ್ರೋಜನ್​ ಮತ್ತು ಲಿಕ್ವಿಡ್​ ಆಮ್ಲಜನಕ ಬಳಸಿ ನಿರ್ಮಿತ ಕ್ರಯೋಜೆನಿಕ್​ ಹಂತವಿತ್ತು. ಒಮ್ಮೆ ಭಾರತಕ್ಕೆ ನಿರಾಕರಿಸಲ್ಪಟ್ಟಿದ್ದ ಈ ತಂತ್ರಾನವನ್ನು ನಾವು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇವೆ. ಕಳೆದ ವರ್ಷ 100&ವಾಟ್​ ಆಮ್ಲಜನಕ ಆಧಾರಿತ ಇಂಧನಕೋಶವನ್ನು ಬಾಹ್ಯಾಕಾಶದಲ್ಲಿ ಪ್ರದರ್ಶಿಸಿದ್ದೇವೆ. ಈಗ 20 ಕಿಲೋವಾಟ್​ ಆವೃತ್ತಿಯ ಪರೀೆ ನಡೆಯುತ್ತಿದೆ ಎಂದು ಹೇಳಿದರು.

ಹೈಡ್ರೋಜನ್​ ಬಸ್​ಗಳು, ರೈಲುಗಳು, ವಿಮಾನಗಳು ಹಾಗೂ ಇಂಧನ ಕೋಶಗಳಲ್ಲಿ ಬಳಕೆಯಾಗಬಹುದು. 2010/11ರಲ್ಲಿ ಟಾಟಾ ಮೋಟಾರ್ಸ್​ ಜತೆಗೂಡಿ ಇಸ್ರೋ ಹೈಡ್ರೋಜನ್​ ಇಂಧನಕೋಶ ಬಸ್​ ನಿರ್ಮಿಸಿ ಯಶಸ್ವಿಯಾಗಿ ಪರೀೆ ನಡೆಸಿತು. 2025ರ ಜೂನ್​ನಲ್ಲಿ ಐದು ಹೈಡ್ರೋಜನ್​ ಬಸ್​ಗಳು ವಾಣಿಜ್ಯ ಸೇವೆಗೆ ಪ್ರವೇಶಿಸಿವೆ. ಬಿಎಚ್​ಇಎಲ್​ ಹಾಗೂ ಎನ್​ಟಿಪಿಸಿ ಈಗ ಹೈಡ್ರೋಜನ್​ ಗ್ಯಾಸ್​ ಟರ್ಬೈನ್​ ಇಂಜಿನ್​ ವ್ಯವಸ್ಥೆಗಳತ್ತ ಕೆಲಸ ಮಾಡುತ್ತಿದೆ ಎಂದು ಹೇಳಿದರು. ಹೈಡ್ರೋಜನ್​ ಜ್ವಾಲೆ ಬಣ್ಣವಿಲ್ಲದಿರುವುದರಿಂದ ಅಪಾಯಕರ. ಹೈಡ್ರೋಜನ್​ ಸಂಗ್ರಹಣಾ ಸೌಲಭ್ಯಗಳು ವಿಸ್ತಾರವಾಗುತ್ತಿರುವುದರಿಂದ ಉತ್ತಮ ಸೆನ್ಸರ್​ಗಳ ಅವಶ್ಯಕತೆ ಇದೆ. ಪ್ರಸ್ತುತ 3/4 ಸೆಕೆಂಡು ಪ್ರತಿಕ್ರಿಯೆ ನೀಡುವ ಸೆನ್ಸರ್​ಗಳ ಬದಲು ಮಿಲಿಸೆಕೆಂಡ್​ಮಟ್ಟದ ತಂತ್ರಾನ ಅಗತ್ಯ ಇದರ ಬಗ್ಗೆ ಅಧ್ಯಯನಗಳಾಗ ಬೇಕಿದೆ ಎಂದು ಹೇಳಿದರು.

150ಕ್ಕೂ ಹೆಚ್ಚು ತರು ಭಾಗಿ : ಸಿಐಐಎಸ್​ ಕಾರ್ಯದರ್ಶಿ ಪ್ರದಿಪ್​ಕುಮಾರ್​ ಪಾಂಡೆ ಮಾತನಾಡಿ, 150ಕ್ಕೂ ಹೆಚ್ಚು ತರು ಭಾಗವಹಿಸಿದ್ದು, ದೇಶಾದ್ಯಂತದ ಸಂಶೋಧನಾ ಸಂಸ್ಥೆಗಳು ಹಾಗೂ ಕೈಗಾರಿಕೆಗಳ ಸಹಕಾರದಿಂದ ಹೈಡ್ರೋಜನ್​ ೇತ್ರದಲ್ಲಿ ಭಾರತದ ಸ್ಥಾನ ಬಲಪಡಿಸಲು ದಾರಿ ತೋರಲಿದೆ ಎಂದರು. ಈ ಕಾರ್ಯಾಗಾರವು "ರಾಷ್ಟ್ರೀಯ ಹಸಿರು ಹೈಡ್ರೋಜನ್​ ಮಿಷನ್​' ಅಡಿಯಲ್ಲಿ ಭಾರತ ಜಾಗತಿಕ ಹೈಡ್ರೋಜನ್​ ಕೇಂದ್ರವಾಗಿ ಹೊರಹೊಮ್ಮುವುದಕ್ಕೆ ದಾರಿ ದೀಪವಾಗಿದೆ. ಸಂಶೋಧಕರು, ಮತ್ತು ಕೈಗಾರಿಕಾ ನಾಯಕರಿಗೆ ಹೈಡ್ರೋಜನ್​ ತಂತ್ರಾನಗಳ ಸವಾಲು ಹಾಗೂ ಅವಕಾಶಗಳ ಬಗ್ಗೆ ಚರ್ಚಿಸಲು ಇದು ಉತ್ತಮ ವೇದಿಕೆಯಾಯಿತು ಎಂದು ಹೇಳಿದರು.

ಭವಿಷ್ಯ ಈಗಲೇ ಪ್ರಾರಂಭ : ಹೈಡ್ರೋಜನ್​ ಶೂನ್ಯ ಕಾರ್ಬನ್​ ಹೊರಸೂಸುವಿಕೆಯಿಂದ ಶುದ್ಧ, ಕಾರ್ಯಮ ಮತ್ತು ಬಹುಮುಖಇಂಧನವಾಗಿದ್ದು, ಸ್ಥಿರ ಭವಿಷ್ಯದ ಶಕ್ತಿ ಸಾಗಾಣೆಕೆಯಲ್ಲಿ ಜಾಗತಿಕ ಗಮನ ಸೆಳೆದಿದೆ. ಇದನ್ನು ಭವಿಷ್ಯದ ಇಂಧನವೆಂದು ಕರೆಯುತ್ತಾರೆ, ಆದರೆ ನಿಜವಾಗಿ ಹೇಳಬೇಕಾದರೆ ಭವಿಷ್ಯ ಈಗಲೇ ಪ್ರಾರಂಭವಾಗಿದೆ ಎಂದು ಅಲಯನ್ಸ್​ ವಿಶ್ವವಿದ್ಯಾಲಯದ ಪೊ&ಚಾನ್ಸೆಲರ್​ ಅಭಯ್​ ಜಿ.ಚೆಬ್ಬಿ ಅಭಿಪ್ರಾಯಪಟ್ಟರು.

ಭಾರತವು ನೆಟ್​&ಶೂನ್ಯ ಗುರಿ ಸಾಧಿಸಲು ಹೈಡ್ರೋಜನ್​ ಆರ್ಥಿಕತೆಯತ್ತ ವೇಗವಾಗಿ ಸಾಗಬೇಕು. ಇಂಧನ ಸಂಗ್ರಹಣೆ, ಮೆಥನಾಲ್​ ಆಧಾರಿತ ಪರಿಹಾರಗಳು, 700 ಬಾರ್​ಮಟ್ಟದ ಸ್ಟೋರೇಜ್​ ವ್ಯವಸ್ಥೆಗಳು ಮತ್ತು ಸ್ವದೇಶಿ ತಂತ್ರಾನ ಅಭಿವೃದ್ಧಿ ಅಗತ್ಯವಾಗಿದೆ. ಇದರ ಬಗ್ಗೆ ಅಧ್ಯಯನ ಮಾಡುವ ಅಗತ್ಯ ಇದೆ. > ಡಾ.ವಿಜಯಕುಮಾರ್​ ಸರಸ್ವತ್​ ನೀತಿ ಆಯೋಗದ ಗೌರವ ಸದಸ್ಯ ಹಾಗೂ ಸಿಐಐಎಸ್​ ಅಧ್ಯ ಹೈಡ್ರೋಜನ್​ ಸಂಶೋಧನೆಯ ಅಗತ್ಯವನ್ನು ವಿವರಿಸುತ್ತ ಹೈಡ್ರೋಜನ್​ ಕೇವಲ ಮೂಲಧಾತುವಲ್ಲ. ಇದು ಉತ್ಕಟಕ, ಇಂಧನ ಹಾಗೂ ನವೀಕರಿಸಬಹುದಾದ ಶಕ್ತಿ ಹಾಗೂ ಜ್ವಲನೀಯ ಇಂಧನಗಳ ನಡುವಿನ ಸೇತುವೆ. > ಡಾ.ಎನ್​.ಕಲೈಸೆಲ್ವಿ ಸಿಎಸ್​ಐಆರ್​ ಮಹಾನಿರ್ದೇಶಕಿ