ಜಿಲ್ಲೆ

ಜಿತೋದಿಂದ ನೆಡುತೋಪು ಅಭಿಯಾನ

Dharwada - Basavaraj Idli

ಹುಬ್ಬಳ್ಳಿ: ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆಯನ್ನು ಎದುರಿಸಲು ಜಿತೋ ಹುಬ್ಬಳ್ಳಿ ಚಾಪ್ಟರ್ ಮತ್ತು ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಸೌತ್ ವತಿಯಿಂದ ನೆಡುತೋಪು ಅಭಿಯಾನ ಪ್ರಾರಂಭಿಸಲಾಗಿದೆ.

ಜನರಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ನಗರದ ಕೇಶ್ವಾಪುರ ಅರಿಹಂತ ಸೊಸೈಟಿ ತೋಟದಲ್ಲಿ 21 ಸಸಿಗಳನ್ನು ನೆಡುವ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಜಿತೋ ಅಧ್ಯಕ್ಷ ಅನಿಲಕುಮಾರ ಜೈನ್, ಹಿಂದಿನ ಅಧ್ಯಕ್ಷ ಭವರಲಾಲ್ ಸಿ. ಜೈನ್, ಸಿ.ಎಸ್. ಪ್ರವಿಣ ಚೌಧರಿ, ಭೇರುಲಾಲಜಿ ಜೈನ್, -ಡಾ. ಗೌತಮ್ ಜಾಯದೆ, ಸುನಿಲ್ ಲಡ್ಡಾ, ಶ್ರೀಪಾಲ ಮೆಹ್ತಾ, ರಾಜನ್ ಜೈನ್, ಮನೀಶ್ ಜೈನ್, ಸಂಗೀತಾ ಜೈನ್, ಪ್ರಭಾ ಮುನಿಯೋತ್, ಲಲಿತಾ ಸುರಾನ, ಆಶಿಶ್ ನಹತಾ, ಕಮಲೇಶ್ ಜೈನ್ ಇತರರು ಪಾಲ್ಗೊಂಡಿದ್ದರು.