ಜಿಲ್ಲೆ

ಸ್ವಚ್ಛ ಸಿವಿಲ್ ಸ್ಟೇಷನ್ ಯೋಜನೆಗೆ ಚಾಲನೆ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಜಿಲ್ಲಾ ಪಂಚಾಯಿತಿ, ಜಲ ಭದ್ರತೆ ಮತ್ತು ಹವಾಮಾನ ಹೊಂದಾಣಿಕೆ, ’ವಾಸ್ಕಾ’ ಯೋಜನೆ ತಾಂತ್ರಿಕ ನೆರವಿನೊಂದಿಗೆ ’ಹಸಿರು ಮತ್ತು ಸ್ವಚ್ಛ ಸಿವಿಲ್ ಸ್ಟೇಷನ್’ ಕಾರ್ಯಕ್ರಮದ ಸಹಯೋಗದಲ್ಲಿ ವಿದ್ಯಾನಗರ ಕಲೆಕ್ಟರೇಟ್ ಕಾಂಪೌಂಡ್‌ನ ಒಂದು ಎಕರೆ ವಿಸ್ತೀರ್ಣದಲ್ಲಿ ಮಾದರಿ ವನ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಿಯಾವಾಕಿ ಮಾದರಿ ವನ ಮತ್ತು ಹಣ್ಣಿನ ತೋಟದ ಬೆಳೆಸುವ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಚೆಂಗಳ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸಫಿಯಾ ಹಾಶಿಮ್ ಸಸಿಗಳನ್ನು ನೆಡುವ ಮೂಲಕ ಯೋಜನೆಗೆ ಚಾಲನೆ ನೀಡಿದರು.

ಚೆಂಗಳ ಗ್ರಾಮ ಪಂಚಾಯಿತಿ ಸದಸ್ಯೆ ಪಿ.ಖದೀಜಾ, ಜಂಟಿ ನಿರ್ದೇಶಕರ ಕಚೇರಿ ಹಿರಿಯ ಅಧೀಕ್ಷಕ ಪೌಲ್ಸನ್ ಡೇವಿಡ್, ಚೆಂಗಳ ಗ್ರಾಮ ಪಂಚಾಯಿತಿ ನರೇಗಾ ಅಧಿಕಾರಿಗಳು, ಜಿಲ್ಲಾಮಟ್ಟದ ನರೇಗಾ ಅಧಿಕಾರಿಗಳು, ಕೃಷಿ ಅಭಿಯಂ, ಕಾಸರಗೋಡು ಜಿಲ್ಲಾ ಕೋರ್ಡಿನೇಟರ್, ನರೇಗಾ ಚೆಂಗಳ ಪಂಚಾಯಿತಿ ಸಮಿತಿ ಉಪಸ್ಥಿತರಿದ್ದರು.