ಜಿಲ್ಲೆ

ಬೇಲೂರಿನಲ್ಲೂ ಲಾಕ್‌ಡೌನ್‌ಗೆ ಉತ್ತಮ ಬೆಂಬಲ

Hassan

ಬೇಲೂರು: ಸೋಂಕು ತಡೆಗಟ್ಟುವ ಸಲುವಾಗಿ ಸರ್ಕಾರ ಕರೆ ನೀಡಿರುವ ಭಾನುವಾರದ ಲಾಕ್‌ಡೌನ್‌ಗೆ ಬೇಲೂರಿನಲ್ಲಿ ಉತ್ತಮ ಬೆಂಬಲ ವ್ಯಕ್ತವಾಯಿತು.

ಕೆಲ ಹೋಟೆಲ್ ಹಾಗೂ ವಾಹನಗಳನ್ನು ಹೊರತು ಪಡಿಸಿದರೆ ಪಟ್ಟಣ ಸಂಪೂರ್ಣ ಬಂದ್ ಆಗಿತ್ತು. ಲಾಕ್‌ಡೌನ್‌ಗೆ ಬೆಂಬಲವಾಗಿ ವರ್ತಕರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬೆಂಬಲ ಸೂಚಿಸಿದರು. ಅಲ್ಲಲ್ಲಿ ಬೈಕ್ ಸವಾರರು ಹಾಗೂ ಇತರ ವಾಹನಗಳಲ್ಲಿ ಓಡಾಡು ವವರು ಕಂಡು ಬಂದರು.