ಮುದಗಲ್ ಇಂದಿರಗಾಂಧಿ ವಸತಿ ಶಾಲೆಯಲ್ಲಿ ಗಣಿತ, ವಿಜ್ಞಾನ ಪ್ರಾಯೋಗಿಕ ಪ್ರದರ್ಶನ ಕಾರ್ಯಕ್ರಮವನ್ನು ಉರ್ದು ಪ್ರೌಢಶಾಲೆ ಮುಖ್ಯಶಿಕ್ಷಕ ಮಹ್ಮದ್ ಷರೀಫ್ ಉದ್ಘಾಟಿಸಿದರು. ಪ್ರಾಂಚಾರ್ಯ ದುರುಗಪ್ಪ, ಪ್ರಮುಖರಾದ ಮಹಾಂತೇಶ ಗೌಡರ್, ಸೋಮನಾಥ ಪಾಮನಕೆಲ್ಲೂರು ಇತರರಿದ್ದರು. 
ಜಿಲ್ಲೆ

ಮಕ್ಕಳ ಆವಿಷ್ಕಾರಗಳಿಗೆ ಉತ್ತಮ ವೇದಿಕೆ

ಗಾಯತ್ರಿ ಮಾಲಿಪಾಟೀಲ್

ಮುದಗಲ್: ವಿಜ್ಞಾನ ಪ್ರದರ್ಶನಗಳಿಂದ ಮಕ್ಕಳಲ್ಲಿನ ಮೌಢ್ಯತೆ ಹೊಗಲಾಡಿಸಬಹುದು ಎಂದು ಉರ್ದು ಪ್ರೌಢಶಾಲೆ ಮುಖ್ಯಶಿಕ್ಷಕ ಮಹ್ಮದ್ ಷರೀಫ್ ಹೇಳಿದರು. ಪಟ್ಟಣ ಹೊರವಲಯದಲ್ಲಿರುವ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಜ್ಞಾನ ಮತ್ತು ಗಣಿತ ಪ್ರಾಯೋಗಿಕ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಕ್ಕಳ ಸೃಜನಶೀಲತೆ ಹಾಗೂ ಪ್ರತಿಭೆ ಹೊರಹಾಕಲು ಇದು ಉತ್ತಮ ವೇದಿಕೆಯಾಗಿದ್ದು, ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಿ ಮಕ್ಕಳಲ್ಲಿ ಅಡಗಿರುವ ಆಧುನಿಕ ಆವಿಷ್ಕಾರಗಳಿಗೆ ರೂಪ ಕೊಡಲು ಪ್ರದರ್ಶನಗಳು ಸಹಕಾರಿ ಎಂದರು.

ಇಂದಿರಾಗಾಂಧಿ ವಸತಿ ಶಾಲೆ ಗಣಿತ ಶಿಕ್ಷಕ ಸೋಮನಾಥ ಹಾಗೂ ವಿಜ್ಞಾನ ಶಿಕ್ಷಕಿ ದೀಪಿಕಾ ಅವರ ಮಾರ್ಗದರ್ಶನದಲ್ಲಿ 20 ಗಣಿತ, 20 ವಿಜ್ಞಾನ ಪ್ರಾಯೋಗಿಕಗಳನ್ನು ಮಕ್ಕಳು ಪ್ರಸ್ತುತ ಪಡಿಸಿದರು.